ಸಾಂದರ್ಭಿಕ ಚಿತ್ರ 
ದೇಶ

ಸಿಬಿಎಸ್ ಇ 10ನೇ ತರಗತಿ ಫಲಿತಾಂಶ ಪ್ರಕಟ, ಬಾಲಕಿಯರೇ ಮೇಲುಗೈ

ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ ಇ)ಯ 11ನೇ ತರಗತಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ.

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ ಇ)ಯ 11ನೇ ತರಗತಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ದೇಶಾದ್ಯಂತ ಒಟ್ಟಾರೆ ಶೇ.91.10ರಷ್ಟು ಫಲಿತಾಂಶ ಹೊರಬಿದ್ದಿದೆ.
ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಬಾಲಕರಿಗಿಂತ ಶೇ.2.31ರಷ್ಟು ಹೆಚ್ಚು ಫಲಿತಾಂಶ ಗಳಿಸಿದ್ದಾರೆ. ಶೇ.92.42ರಷ್ಟು ಬಾಲಕಿಯರು ತೇರ್ಗಡೆ ಹೊಂದಿದ್ದರೆ, ಶೇ.90.14ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.
ತುಮಕೂರಿನ ವಿದ್ಯಾ ವಾರಿಧಿ ಅಂತಾರಾಷ್ಟ್ರೀಯ ಶಾಲೆಯ ಯಶಸ್ ಡಿ ಅವರು ರಾಜ್ಯದಲ್ಲಿ ಮಾತ್ರವಲ್ಲ ಚೆನ್ನೈ ಪ್ರದೇಶದಲ್ಲಿ ಕೂಡ ಪ್ರಥಮ ಸ್ಥಾನ ಗಳಿಸಿದ್ದಾರೆ. 5 ಒಟ್ಟಾರೆ ಫಲಿತಾಂಶದ ಪಟ್ಟಿಯಲ್ಲಿ ಯಶಸ್ 32ನೇ ಶ್ರೇಯಾಂಕ ಗಳಿಸಿದ್ದಾರೆ.

ಧಾರವಾಡದ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನ ಗಿರಿಜಾ ಎಂ. ಹೆಗ್ಡೆ ಅವರು 497 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ 44ನೇ ಸ್ಥಾನ  ಗಳಿಸಿದ್ದಾರೆ.

ಬೆಂಗಳೂರು ಪ್ರೆಸೆಡೆನ್ಸಿ ಶಾಲೆಯ ಐಶ್ವರ್ಯ ಹರಿಹರನ್ ಐಯ್ಯರ್ ಹಾಗೂ ನಾಲದಾಳ ದಿಶಾ ಚೌದರಿ ಅವರು ಕೂಡ 497 ಅಂಕಗಳಿಸಿ ಎರಡನೇ ಸ್ಥಾನಗಳಿಸಿದ್ದು, ರಾಷ್ಟ್ರಮಟ್ಟದಲ್ಲಿ 50 ಹಾಗೂ 51ನೇ ಶ್ರೇಯಾಂಕದಲ್ಲಿದ್ದಾರೆ.

ಸಿಬಿಎಸ್ ಇ ಪರೀಕ್ಷಾ ಮಂಡಳಿಯ 10 ಪ್ರದೇಶಗಳ ಪೈಕಿ ಕರ್ನಾಟಕವನ್ನೊಳಗೊಂಡ ಚೆನ್ನೈ ಪ್ರದೇಶ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ.

ಕಳೆದ ಫೆಬ್ರವರಿ 15ರಿಂದ ಏಪ್ರಿಲ್ 14ರವರೆಗೆ ನಡೆದಿದ್ದ ಸಿಬಿಎಸ್ ಇ ಶಾಲೆಗಳ 10ನೇ ತರಗತಿಯ ಪರೀಕ್ಷೆಗೆ  ಒಟ್ಟು 17.61 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 16.04 ಲಕ್ಷ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಶೇ.4.40ರಷ್ಟು ಹೆಚ್ಚಳ ಕಂಡುಬಂದಿದೆ. ಕಳೆದ ವರ್ಷ ಶೇ.86.70ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು.

ತಿರುವನಂತಪುರ ಶೇ. 99.85ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಗಳಿಸಿದೆ. ಕ್ರಮವಾಗಿ ಚೆನ್ನೈ (ಶೇ.99), ಅಜ್ಮೀರ್ (ಶೇ.95.89), ಪಂಚಕುಲ (ಶೇ.93.72), ಪ್ರಯಾಗ್ ರಾಜ್ (ಶೇ.92.55) ಭುವನೇಶ್ವರ (ಶೇ.92.32), ಪಾಟನಾ (91.86) ಡೆಹ್ರಾಡೂನ್ (ಶೇ.89.04), ದೆಹಲಿ (ಶೇ.80.97), ಗುವಾಹತಿ (ಶೇ.74.49) ರಾಜ್ಯಗಳು ಅತಿ ಹೆಚ್ಚು ಫಲಿತಾಂಶ ಗಳಿಸಿದ ಮೊದಲ ಹತ್ತು ರಾಜ್ಯಗಳಾಗಿವೆ.  ದೇಶಾದ್ಯಂತ 4974 ಶಾಲೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಸಿಬಿಎಸ್ ಇ ಹತ್ತನೇ ತರಗತಿ ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ಗಳಾದ cbse.nic.in ಮತ್ತು cbseresutls.nic.in ನಲ್ಲಿ ಫಲಿತಾಂಶ ನೋಡಬಹುದಾಗಿದೆ.
ಕಳೆದ ವಾರ ಮೇ 2 ರಂದು ಸಿಬಿಸಿಇ ಮಂಡಳಿ 12 ತರಗತಿಯ ಫಲಿತಾಂಶವನ್ನು ಪ್ರಕಟಿಸಿತ್ತು. ಶೇ. 83.4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. 2018ರಲ್ಲಿ ಶೇ. 83.01 ಫಲಿತಾಂಶ ಬಂದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT