ದೇಶ

ಇಬ್ಬರು ಎಐಎಡಿಎಂಕೆ ಶಾಸಕರ ಅನರ್ಹತೆಗೆ ಸುಪ್ರೀಂ ಕೋರ್ಟ್‌ ತಡೆ

Lingaraj Badiger
ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ತಮಿಳುನಾಡು  ವಿಧಾನಸಭೆ ಸ್ಪೀಕರ್‌ ಅವರಿಂದ ಅನರ್ಹತೆ ನೊಟೀಸ್‌ ಪಡೆದಿದ್ದ ಇಬ್ಬರು ಎಐಎಡಿಎಂಕೆ ಶಾಸಕರ ಅನರ್ಹತೆ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ.
ಅನರ್ಹತೆ ಪ್ರಶ್ನಿಸಿ ಎಐಎಡಿಎಂಕೆ ಶಾಸಕರಾದ ವಿ ಟಿ ಕಲೈಸೆಲ್ವನ್‌ ಮತ್ತು ಇ ರತ್ನಸಭಾಪತಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು, ಅನರ್ಹತೆ ಕ್ರಮಕ್ಕೆ ತಡೆ ನೀಡಿದ್ದಾರೆ.
ಎಎಂಎಂಕೆ ನಾಯಕ ಟಿಟಿವಿ ದಿನಕರನ್ ಜತೆ ಗುರುತಿಸಿಕೊಂಡಿದ್ದ ಶಾಸಕರಾದ ಎ ಪ್ರಭು ಕಲೈಸೆಲ್ವನ್‌ ಮತ್ತು ಇ ರತ್ನಸಭಾಪತಿ ಅವರಿಗೆ ಕಳೆದ ಏಪ್ರಿಲ್ 30ರಂದು ಪಕ್ಷಾಂತರ ನಿಷೇಧ ಕಾನೂನಿನಡಿ ಸ್ಪೀಕರ್‌ ಪಿ ಧನಪಾಲ್ ಅವರು ಅನರ್ಹತೆ ನೊಟೀಸ್‌ ಜಾರಿಮಾಡಿದ್ದರು. ಮೂವರು ಶಾಸಕರ ಪೈಕಿ ಇಬ್ಬರು ಶಾಸಕರು ಸ್ಪೀಕರ್ ನೋಟಿಸ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದರು.
SCROLL FOR NEXT