ನವದೆಹಲಿ: ಫೋನಿ ಚಂಡಮಾರುತ ಪೀಡಿತ ಒಡಿಶಾ ರಾಜ್ಯದ ಪುನರ್ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯಂತೆ 1 ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಗೃಹ ಸಚಿವಾಲಯ ಇಂದು ಬಿಡುಗಡೆ ಮಾಡಿದೆ.
ಹೆಚ್ಚುವರಿ ಹಣದಲ್ಲಿ 341 ಕೋಟಿ ರೂಪಾಯಿಯನ್ನು ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಳೆದ 43 ವರ್ಷಗಳಲ್ಲಿ ಮೇ 3 ರಂದು ಮೊದಲ ಬಾರಿಗೆ ಸಂಭವಿಸಿದ್ದ ಅಪರೂಪದ ಬೇಸಿಗೆ ಫೋನಿ ಚಂಡಮಾರುತದಲ್ಲಿ 35 ಮಂದಿ ಮೃತಪಟ್ಟಿದ್ದರು.ವಿದ್ಯುತ್, ದೂರಸಂಪರ್ಕ ಹಾಗೂ ಕುಡಿಯುವ ನೀರು ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಚಂಡಮಾರುತ ಪೀಡಿತ ಒಡಿಶಾದ ವಿವಿಧೆಡೆ ಇಂದು ರಾಷ್ಟ್ರೀಯ ವಿಕೋಪ ನಿರ್ವಹಣಾ ಸಮಿತಿ ಸಂಪುಟ ಕಾರ್ಯದರ್ಶಿ ಪಿ. ಕೆ. ಸಿನ್ಹಾ ಭೇಟಿ ನೀಡಿ ಪರಿಹಾರ ಕಾರ್ಯಗಳ ಬಗ್ಗೆ ಪರಾಮರ್ಶೆ ನಡೆಸಿದರು.
ಪುರಿ ಮತ್ತು ಭುವನೇಶ್ವರದಲ್ಲಿ ವಿದ್ಯುತ್ ಮತ್ತು ಟೆಲಿಕಮ್ಯೂನಿಕೇಷನ್ ಸೌಕರ್ಯ ಮರು ಸ್ಥಾಪಿಸಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics