ಎಚ್ ಎಸ್ ಫೂಲ್ಕಾ 
ದೇಶ

1984ರಲ್ಲಿ ಸಿಖ್ ರನ್ನು ಸಾಯಿಸುವಂತೆ ಪ್ರಧಾನಿ ಕಚೇರಿಯೇ ನಿರ್ದೇಶನ ನೀಡಿತ್ತು: ಎಚ್ಎಸ್ ಫೂಲ್ಕಾ

ದೆಹಲಿಯಲ್ಲಿ 1984ರಲ್ಲಿ ನಡೆದ ಸಿಖ್‌ ವಿರೋಧಿ ಗಲಭೆ ವೇಳೆ ಸಿಖ್ ರನ್ನು ಸಾಯಿಸುವಂತೆ ಪ್ರಧಾನ ಮಂತ್ರಿಗಳ ಕಚೇರಿಯೇ ನೇರವಾಗಿ ನಿರ್ದೇಶನ ನೀಡಿತ್ತು...

ನವದೆಹಲಿ: ದೆಹಲಿಯಲ್ಲಿ 1984ರಲ್ಲಿ ನಡೆದ ಸಿಖ್‌ ವಿರೋಧಿ ಗಲಭೆ ವೇಳೆ ಸಿಖ್ ರನ್ನು ಸಾಯಿಸುವಂತೆ ಪ್ರಧಾನ ಮಂತ್ರಿಗಳ ಕಚೇರಿಯೇ ನೇರವಾಗಿ ನಿರ್ದೇಶನ ನೀಡಿತ್ತು ಎಂದು ಹಿರಿಯ ವಕೀಲ ಹಾಗೂ ಸಿಖ್‌ ವಿರೋಧಿ ಗಲಭೆ ಸಂತ್ರಸ್ತರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿರುವ ಎಚ್ ಎಸ್ ಫೂಲ್ಕಾ ಅವರು ಆರೋಪಿಸಿದ್ದಾರೆ.
1984ರಲ್ಲಿ ಪ್ರಧಾನಿ ಕಚೇರಿಯ ಸೂಚನೆಯಂತೆ ಹಲವು ಸಿಖ್ ರನ್ನು ಹತ್ಯೆ ಮಾಡಿದ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಇವೆ. ಆ ಸಾಕ್ಷ್ಯಗಳನ್ನು ನಾವು ನಾನಾವತಿ ಆಯೋಗ ಮತ್ತು ಮಿಶ್ರಾ ಆಯೋಗಕ್ಕೆ ನೀಡಿದ್ದೇವೆ ಎಂದು ಫೂಲ್ಕಾ ಎಎನ್ಐಗೆ ತಿಳಿಸಿದ್ದಾರೆ.
ಸಿಖ್ ಗಲಭೆ ವೇಳೆ ಸೇನೆಯನ್ನು ಹಿಂಪಡೆದಿರಲಿಲ್ಲ. ಹೀಗಾಗಿ ಅಂದು ಗೃಹ ಸಚಿವ ನರಸಿಂಹ ರಾವ್ ಅವರ ಮನೆಗೆ ತೆರಳಿ, ಸೇನೆ ಅಮಾಯಕ ಜನರನ್ನು ಹತ್ಯೆ ಮಾಡುತ್ತಿದ್ದು, ಕೂಡಲೇ ಸೇನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದೆ. ಇದಕ್ಕೆ ಅವರು ಒಪ್ಪಿದ್ದರು ಎಂದು ಫೂಲ್ಕಾ ವಿವರಿಸಿದ್ದಾರೆ.
ಅಂದು ರಾಷ್ಟ್ರಪತಿಗಳು, ಕೇಂದ್ರ ಕಾನೂನು ಸಚಿವರಾಗಿದ್ದ ಶಾಂತಿ ಭೂಷಣ್ ಹಾಗೂ ಗೃಹ ಸಚಿವ ನರಸಿಂಹ ರಾವ್ ಅವರು ಸೇನೆ ಹಿಂಪಡೆಯಲು ಬಯಸಿದ್ದರು. ಆದರೆ ಪ್ರಧಾನಿ ಕಚೇರಿ ಮಾತ್ರ ಇದಕ್ಕೆ ಒಪ್ಪಲಿಲ್ಲ. ಈ ಕುರಿತು ನಾವು ಆಯೋಗಕ್ಕೆ ಸಾಕ್ಷ್ಯಗಳನ್ನು ನೀಡಿದ್ದೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್