ದೇಶ

ಚಳಿಗಾಲದ ವಿರಾಮದ ನಂತರ ಮತ್ತೆ ಬಾಗಿಲು ತೆರೆದ ಬದರೀನಾಥ್ ದೇವಾಲಯ

Nagaraja AB

ಉತ್ತರ್ ಖಂಡ್ :ಚಳಿಗಾಲದ ವಿರಾಮದ ನಂತರ ಪ್ರಸಿದ್ಧ ಪುಣ್ಯ ಕ್ಷೇತ್ರ ಬದ್ರಿನಾಥ್ ದೇವಾಲಯದ ಬಾಗಿಲನ್ನು ಭಕ್ತಾಧಿಗಳಿಗಾಗಿ ಇಂದು ಮುಂಜಾನೆಯಿಂದ ಮತ್ತೆ ತೆರೆಯಲಾಗಿದೆ.

ಉತ್ತರ ಖಂಡ್ ರಾಜ್ಯದ ಛಾಮೊಲಿ ಜಿಲ್ಲೆಯಲ್ಲಿರುವ ಬದರೀನಾಥ್ , ಹಿಂದೂಗಳ ಪವಿತ್ರ ಪಟ್ಟಣವಾಗಿದೆ. ಭಾರತದ ನಾಲ್ಕು ಛಾರ್ ಧಾಮ ತೀರ್ಥಯಾತ್ರೆಯ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಉಳ್ಳದಾಗಿದೆ.

 ಹಿಮಾಲಯದ ತಪ್ಪಲಿನ ದೇವಾಲಯದ ಬಾಗಿಲನ್ನು  ಬೆಳಗ್ಗೆ 4-15 ರ ಸುಮಾರಿನಲ್ಲಿ ಅಸಂಖ್ಯಾತ ಭಕ್ತಾಧಿಗಳು, ದೇವಾಲಯದ ಸಮಿತಿ ಹಾಗೂ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಪ್ರಧಾನ ಆರ್ಚಕ ಈಶ್ವರಿ ಪ್ರಸಾದ್ ನಾಂಬುದಿರಿ ತೆಗೆದರು.

ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು,  ಬಾಗಿಲು ತೆರೆದ ಮೊದಲ ದಿನವೇ ಸುಮಾರು 10 ಸಾವಿರ ಭಕ್ತಾಧಿಗಳು ಭೇಟಿ ನೀಡಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

SCROLL FOR NEXT