ದೇಶ

ಬಾಲಕೋಟ್ ದಾಳಿ ನಂತರ ಎಲ್ ಒಸಿ ಶಾಂತಗೊಳಿಸಲು ಪಾಕ್ ಆಗ್ರಹ

Lingaraj Badiger
ನವದೆಹಲಿ: ಪುಲ್ವಾಮಾ ಉಗ್ರ ದಾಳಿ ಮತ್ತು ಭಾರತೀಯ ವಾಯುಪಡೆ ಬಾಲಕೋಟ್ ಮೇಲೆ ನಡೆಸಿದ ವಾಯು ದಾಳಿಯ ನಂತರ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಬಳಿ ಉಭಯ ದೇಶಗಳು ಭದ್ರತಾ ಪಡೆಗಳ ನಡುವಿನ ಉದ್ವಿಗ್ನತೆಯನ್ನು ತಗ್ಗಿಸಬೇಕು ಎಂದು ಪಾಕಿಸ್ತಾನ, ಭಾರತಕ್ಕೆ ಒತ್ತಾಯಿಸಿದೆ.
ಮಾಧ್ಯಮಗಳ ವರದಿಯ ಪ್ರಕಾರ, ಎಲ್ ಒಸಿ ಬಳಿ ಸೇನೆ ನಿಯೋಜನೆಯನ್ನು ಕಡಿಮೆಗೊಳಿಸಬೇಕು ಎಂದು ಪಾಕಿಸ್ತಾನ ಸೇನೆ ರಾಜತಾಂತ್ರಿಕ ಮಾರ್ಗದ ಮೂಲಕ ಭಾರತಕ್ಕೆ ಸಂದೇಶ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಎಲ್ ಒಸಿಯಿಂದ ತನ್ನ ಎಸ್ಎಸ್ ಜಿ ಪಡೆಯನ್ನು ಹಿಂಪಡೆಯಲು ಮುಂದಾಗಿದ್ದು, ಎರಡು ಕಡೆಯಿಂದಲೂ ಫಿರಂಗಿ ದಾಳಿಯನ್ನು ನಿಷೇಧಿಸಬೇಕು ಎಂದು ಸಲಹೆ ನೀಡಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಬಾಲಕೋಟ್ ದಾಳಿಯ ನಂತರ ಪಾಕಿಸ್ತಾನ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ ಒಸಿ ಬಳಿ ಮತ್ತು ಗಡಿಯಲ್ಲಿ ವಿಶೇಷ ಪಡೆಗಳನ್ನು ನಿಯೋಜಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಸಹ ಗಡಿಯಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸಿತ್ತು.
SCROLL FOR NEXT