ದೇಶ

ಮೋದಿ ಲೈ ಎಂಬ ಪದವೇ ಇಲ್ಲ; ಆಕ್ಸಫರ್ಡ್ ಡಿಕ್ಷನರಿ ಸ್ಪಷ್ಟನೆ, ರಾಹುಲ್ ಗಾಂಧಿಗೆ ಟ್ವೀಟಿಗರ ತರಾಟೆ!

Srinivasamurthy VN
ನವದೆಹಲಿ: ಇಂಗ್ಲೀಷ್‌ ನಿಘಂಟಿಗೆ 'ಮೋದಿ ಲೈ'(Modilie) ಎಂಬ ಹೊಸ ಪದ ಸೇರ್ಪಡೆಯಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಕಾಲೆಳೆಯುವ ಪ್ರಯತ್ನ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಗೆ ಸಂಬಂಧಿಸಿದಂತೆ ಆಕ್ಸಫರ್ಡ್ ಡಿಕ್ಷನರಿ ಸ್ಪಷ್ಟನೆ ನೀಡಿದ್ದು, ತಮ್ಮ ಡಿಕ್ಷನರಿಯಲ್ಲಿ ಮೋದಿ ಲೈ ಎಂಬ ಪದವೇ ಇಲ್ಲ ಎಂದು ಹೇಳಿದೆ.
ಈ ಹಿಂದೆ ರಾಹುಲ್ ಗಾಂಧಿ ಅವರು, 'ಇಂಗ್ಲೀಷ್‌ ನಿಘಂಟಿಗೆ 'ಮೋದಿ ಲೈ'(Modilie) ಎಂಬ ಹೊಸ ಪದ ಸೇರ್ಪಡೆಯಾಗಿದೆ. ಇದರ ಅರ್ಥ ಪದೇ ಪದೇ ಸತ್ಯವನ್ನು ಮಾರ್ಪಡಿಸುವುದು ಎಂದು ಸ್ಕ್ರೀನ್‌ ಶಾಟ್‌ವೊಂದನ್ನು ರಾಹುಲ್‌ ಗಾಂಧಿ ಮಂಗಳವಾರ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಟ್ವೀಟ್ ಗೆ ವ್ಯಾಪಕ ಪರ-ವಿರೋಧ ಚರ್ಚೆ ಕೂಡ ನಡೆದಿತ್ತು. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಆಕ್ಸಫರ್ಡ್ ಡಿಕ್ಷನರಿ ಸ್ಪಷ್ಟನೆ ನೀಡಿದ್ದು, ತಮ್ಮ ಡಿಕ್ಷನರಿಯಲ್ಲಿ ಮೋದಿ ಲೈ ಎಂಬ ಪದವೇ ಇಲ್ಲ ಎಂದು ಹೇಳಿದೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಆಕ್ಸಫರ್ಡ್ ಡಿಕ್ಷನರಿ, 'ಮೋದಿ ಲೈ ಎಂಬ ಪದ ನಮ್ಮ ನಿಘಂಟಿನಲ್ಲಿ ಇಲ್ಲ. ರಾಹುಲ್‌ ಗಾಂಧಿ ಸೇರಿದಂತೆ ಅನೇಕರು ಟ್ವೀಟ್‌ ಮಾಡುತ್ತಿರುವ ಇಂಗ್ಲಿಷ್‌ ನಿಘಂಟಿನ ಸ್ಕ್ರೀನ್‌ ಶಾಟ್‌ ಶುದ್ಧ ಸುಳ್ಳು. ನಮ್ಮ ಯಾವುದೇ ನಿಘಂಟಿನಲ್ಲಿ ನಿಮಗೆ ಇಂತಹ ಪದ ಸಿಗುವುದಿಲ್ಲ ಎಂದು ತಿಳಿಸಲಾಗಿದೆ.
SCROLL FOR NEXT