ದೇಶ

ಅಕ್ರಮ ಆಸ್ತಿ ಪ್ರಕರಣ: ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್ ಗೆ ಸಿಬಿಐ ಕ್ಲೀನ್ ಚಿಟ್

Sumana Upadhyaya
ನವದೆಹಲಿ: ಅಕ್ರಮ ಆಸ್ತಿ ಕೇಸಿನಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆ ಕೇಂದ್ರ ತನಿಖಾ ದಳ(ಸಿಬಿಐ) ಕ್ಲೀನ್ ಚಿಟ್ ನೀಡಿದೆ.
ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅಫಿಡವಿಟ್ಟಿಗೆ ಸಂಬಂಧಿಸಿದಂತೆ ತನಿಖಾ ದಳ ಕ್ಲೀನ್ ಚಿಟ್ ನೀಡಿದೆ.
ಸಿಬಿಐ ತನ್ನ ಅಫಿಡವಿಟ್ಟಿನಲ್ಲಿ, ಈ ಪ್ರಕರಣದ ತನಿಖೆಯನ್ನು 2013ರ ಆಗಸ್ಟ್ 7ರಂದು ಮುಕ್ತಾಯಗೊಳಿಸಿದ್ದು, ತಂದೆ ಮಗನ ಮೇಲೆ ಕೇಸು ದಾಖಲಿಸಲು ಯಾವುದೇ ಸಾಕ್ಷಿಗಳು ದೊರೆತಿಲ್ಲ ಎಂದು ಹೇಳಿದೆ.
SCROLL FOR NEXT