ದೇಶ

ಮಧ್ಯಪ್ರದೇಶದ ಕಾಂಗ್ರೆಸ್ ನಲ್ಲೇ ಒಡಕು ಮೂಡಿಸಿದ ಮೋದಿ ಅಭೂತ ಪೂರ್ವ ಗೆಲುವು!

Srinivas Rao BV
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಂಡು ಕೇಳರಿಯದಷ್ಟು ಬಹುಮತ ಪಡೆದಿರುವುದು ಈಗ ಕೆಲವೇ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಮಾರಕವಾಗಿ ಪರಿಣಮಿಸಿದೆ. 
ಎನ್ ಡಿ ಟಿವಿ ವರದಿಯ ಪ್ರಕಾರ ಚುನಾವಣಾ ಫಲಿತಾಂಶದ ಬಳಿಕ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಗೆ ಆಂತರಿಕ ಭಿನ್ನಮತದ ಸಮಸ್ಯೆ ಎದುರಾಗಿದ್ದು, ಕಾಂಗ್ರೆಸ್ ಗೆ ಸರ್ಕಾರ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. 
ಸರ್ಕಾರದಲ್ಲಿ ಭಿನ್ನಮತ ಹೋಗಲಾಡಿಸುವುದಕ್ಕಾಗಿ ಕಮಲ್ ನಾಥ್ ಸರಣಿ ಸಭೆಗಳನ್ನು ನಡೆಸುತ್ತಿದೆ. ಈ ನಡುವೆ ಕಾಂಗ್ರೆಸ್  ನ ನಾಯಕರೇ ಕಮಲ್ ನಾಥ್ ರಾಜೀನಾಮೆ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದ ದೀಪಕ್ ಬಾಬರಿಯಾ ಕಮಲ್ ನಾಥ್ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದರು ಈ ಬೆನ್ನಲ್ಲೇ ಕಮಲ್ ನಾಥ್ ಸ್ಪಷ್ಟನೆ ಕೊಡಬೇಕಾಯಿತು.
ಇತ್ತ ಬಿಜೆಪಿಯಿಂದಲೂ ಸಹ ಸರ್ಕಾರಕ್ಕೆ ಅಪಾಯ ಇದ್ದು, ಕರ್ನಾಟಕದ ಮಾದರಿಯಲ್ಲೇ ಮಧ್ಯಪ್ರದೇಶ ಸರ್ಕಾರ ಸಹ ಪತನಗೊಳ್ಳುವ ಭೀತಿ ಎದುರಿಸುತ್ತಿದೆ. 
SCROLL FOR NEXT