ದೇಶ

ಅಡ್ಮಿರಲ್ ಕರಂಭಿರ್ ಸಿಂಗ್ ಭಾರತೀಯ ನೌಕಾ ಪಡೆಯ ನೂತನ ಮುಖ್ಯಸ್ಥ

Srinivas Rao BV
ನವದೆಹಲಿ: ಭಾರತೀಯ ನೌಕಾ ಪಡೆಯ ಮುಖ್ಯಸ್ಥರಾಗಿ ಅಡ್ಮಿರಲ್ ಕರಂಭಿರ್ ಸಿಂಗ್ ಅಧಿಕಾರ ವಹಿಸಿಕೊಂಡಿದ್ದಾರೆ. 
ಹಾಲಿ ಮುಖ್ಯಸ್ಥರಾಗಿದ್ದ ಅಡ್ಮಿರಲ್ ಸುನಿಲ್ ಲಾಂಬ ಅವರ ಮೂರು ವರ್ಷಗಳ ಸೇವಾ ಅವಧಿ ಮುಕ್ತಾಯಗೊಂಡಿದ್ದು,  ಅಡ್ಮಿರಲ್ ಕರಂಭೀರ್ ಸಿಂಗ್ ಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಭಾರತೀಯ ನೌಕಾ ಪಡೆಯ 24 ನೇ ಮುಖ್ಯಸ್ಥರಾಗಿ ಕರಂಭೀರ್ ಸಿಂಗ್ ಅಧಿಕಾರ ವಹಿಸಿಕೊಂಡಿದ್ದಾರೆ. 
ಭದ್ರ ಬುನಾದಿ ಹೊಂದಿದ್ದ ನೌಕಾ ಪಡೆಯನ್ನು ಅಡ್ಮಿರಲ್ ಸುನಿಲ್ ಲಾಂಬ ಅವರು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಇದನ್ನು ಮುನ್ನಡೆಸುವುದು ಅತಿ ದೊಡ್ಡ ಗೌರವ ಎಂದು ಅಡ್ಮಿರಲ್ ಕರಂಭೀರ್ ಸಿಂಗ್ ಹೇಳಿದ್ದಾರೆ. 
SCROLL FOR NEXT