ನಿರ್ಮಲಾ ಸೀತಾರಾಮನ್ 
ದೇಶ

ನಿರ್ಮಲಾ ಸೀತಾರಾಮನ್: ಕರ್ನಾಟಕದ ಸಂಸದೆ, ಭಾರತದ ಮೊದಲ ಮಹಿಳಾ ವಿತ್ತ ಸಚಿವೆ?

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ವಿತ್ತ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಭಾರತದ ಮೊದಲ ಮಹಿಳಾ ವಿತ್ತ ಖಾತೆ ಸಚಿವರಾಗಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 
ಮೋದಿ-2.0 ಸರ್ಕಾರದ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಅಂತಿಮಗೊಂಡಿದ್ದು, ನಿರ್ಮಲಾ ಸೀತಾರಾಮನ್ ಗೆ ಹಣಕಾಸು ಇಲಾಖೆ ಜವಾಬ್ದಾರಿ ನೀಡಲಾಗಿದೆ. 
1970-71 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿತ್ತ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. 1971-75 ವರೆಗೆ ಯಶವಂತ ರಾವ್ ಚೌಹಾಣ್ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 70-71 ರ ಅವಧಿಯನ್ನು ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ವಿತ್ತ ಖಾತೆಯನ್ನು ನಿರ್ವಹಿಸಲಿದ್ದಾರೆ. 
ಮೋದಿ-1.0 ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್ ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರಕ್ಷಣಾ ಇಲಾಖೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಈವರೆಗೂ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದವರ ಪಟ್ಟಿ ಹೀಗಿದೆ:
  1.   ಆರ್ ಕೆ ಷಣ್ಮುಖಂ ಚೆಟ್ಟಿ – 1947 ಆಗಸ್ಟ್ 15 ರಿಂದ 1949
  2.   ಜನ್ ಮಥಾಯಿ -1949 ರಿಂದ 1950
  3.   ಸಿ ಡಿ ದೇಶ್ ಮುಖ್ -1950 ಮೇ 29 ರಿಂದ 1957
  4.   ಟಿ ಟಿ ಕೃಷ್ಣಮಾಚಾರಿ – 1957 ಫೆಬ್ರವರಿ 13 ರಿಂದ 1958
  5.   ಜವಹರಲಾಲ್ ನೆಹರು – 1958 ಫೆಬ್ರವರಿ 13 ರಿಂದ 1958 ಮಾರ್ಚ್ 13
  6.   ಮೊರಾರ್ಜಿ ದೇಸಾಯಿ – 1958 ಮಾರ್ಚ್ 13 ರಿಂದ 1963 ಆಗಸ್ಟ್ 29
  7.   ಟಿ ಟಿ ಕೃಷ್ಣಮಾಚಾರಿ – 1963 ಆಗಸ್ಟ್ 29 ರಿಂದ 1965
  8.   ಸಚಿಂದ್ರ ಚೌಧರಿ – 1965 ರಿಂದ 1967 ಮಾರ್ಚ್ 13
  9.   ಮೊರಾರ್ಜಿ ದೇಸಾಯಿ – 1967 ಮಾರ್ಚ್ 13 ರಿಂದ 1969 ಜುಲೈ 16 
  10.  ಇಂದಿರಾ ಗಾಂಧಿ – 1970 ರಿಂದ 1971
  11.  ಯಶವಂತರಾವ್ ಚವಾಣ್ – 1971 ರಿಂದ 1975
  12.  ಚಿದಂಬರಂ ಸುಬ್ರಮಣಿಯನ್ – 1975 ರಿಂದ 1977
  13.  ಹರಿಭಾಯ್ ಎಂ ಪಟೇಲ್ – 1977 ಮಾರ್ಚ್ 24 ರಿಂದ 1979 ಜನವರಿ 24
  14.  ಚರಣ್ ಸಿಂಗ್ – 1979 ಜನವರಿ 24 ರಿಂದ 1979 ಜುಲೈ 28
  15.  ಹೇಮ್ವತಿ ನಂದನ್ ಬಹುಗುಣ – 1979 ಜುಲೈ 28 ರಿಂದ 1980 ಜನವರಿ 14
  16.  ಆರ್ ವೆಂಕಟರಾಮನ್ – 1980 ಜನವರಿ 14 ರಿಂದ 1982 ಜನವರಿ 15
  17.  ಪ್ರಣಬ್ ಮುಖರ್ಜಿ – 1982 ಜನವರಿ 15 ರಿಂದ 1984 ಡಿಸೆಂಬರ್ 31
  18.  ವಿಶ್ವನಾಥ್ ಪ್ರತಾಪ್ ಸಿಂಗ್ – 1984 ಡಿಸೆಂಬರ್ 31 ರಿಂದ 1987 ಜನವರಿ 24
  19.  ರಾಜಜೀವ್ ಗಾಂಧಿ – 1987 ಜನವರಿ 24 ರಿಂದ 1987 ಜುಲೈ 25
  20.ನಾರಾಯಣ್ ದತ್ ತಿವಾರಿ – 1987 ಜುಲೈ 25 ರಿಂದ 1988 ಜೂನ್ 25
  21. ಶಂಕರರಾವ್ ಚವಾಣ್ -1988 ಜೂನ್ 25 ರಿಂದ 1989 ಡಿಸೆಂಬರ್
  22. ಮಧು ದಂಡವತೆ – 1989 ಡಿಸೆಂಬರ್ 2 ರಿಂದ 1990 ನವೆಂಬರ್ 10
  23.  ಯಶವಂತ್ ಸಿನ್ಹಾ – 1990 ನವೆಂಬರ್ 10 ರಿಂದ 1991 ಜೂನ್ 21
  24.ಮನಮೋಹನ್ ಸಿಂಗ್ – 1991 ಜೂನ್ 21 ರಿಂದ 1966 ಮೇ 16
  25.  ಜಸ್ವಂತ್ ಸಿಂಗ್ – 1996 ಮೇ 16 ರಿಂದ 1996 ಜೂನ್ 1
  26.  ಪಿ ಚಿದಂಬರಂ – 1996 ಜೂನ್ 1 ರಿಂದ 1997 ಏಪ್ರಿಲ್ 21
  27.  ಐ ಕೆ ಗುಜ್ರಾಲ್ – 1997 ಏಪ್ರಿಲ್ 21 ರಿಂದ 1997 ಮೇ 1
  28.  ಪಿ ಚಿದಂಬರಂ – 1997 ಮೇ 1 ರಿಂದ 1998 ಮಾರ್ಚ್ 19
  29.  ಯಶವಂತ್ ಸಿನ್ಹಾ – 1998 ಮಾರ್ಚ್ 19 ರಿಂದ 2002 ಜುಲೈ 1
  30. ಜಸ್ವಂತ್ ಸಿಂಗ್ – 2002 ಜುಲೈ 1 ರಿಂದ 2004 ಮೇ 22
  31. ಪಿ ಚಿದಂಬರಂ – 2004 ಮೇ 22 ರಿಂದ 2008 ನವೆಂಬರ್ 30
  32. ಮನಮೋಹನ್ ಸಿಂಗ್ – 2008 ನವೆಂಬರ್ 30 ರಿಂದ 2009 ಜನವರಿ 24
  33. ಪ್ರಣಬ್ ಮುಖರ್ಜಿ – 2009 ಜನವರಿ 24 ರಿಂದ 2012 ಜೂನ್ 26
  34. ಮನಮೋಹನ್ ಸಿಂಗ್ – 2012 ಜೂನ್ 26 ರಿಂದ 2012 ಜುಲೈ 31
  35. ಪಿ. ಚಿದಂಬರಂ – 2012 ಜುಲೈ 31 ರಿಂದ 2014 ಮೇ 26 
  36. ಅರುಣ್ ಜೇಟ್ಲಿ – 2014 ಮೇ 26 ರಿಂದ 2019 ಮೇ 30
  37. ನಿರ್ಮಲಾ ಸೀತಾರಾಮನ್ – 2019 ಮೇ 31 ರಿಂದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!