ಇಸ್ರೋ ಮುಖ್ಯಸ್ಥ ಶಿವನ್ 
ದೇಶ

ವಿಕ್ರಮ್ ಲ್ಯಾಂಡರ್​ ಚಂದ್ರನ ದಕ್ಷಿಣ ಧ್ರುವದಲ್ಲಿ ಮತ್ತೆ ಇಳಿಯಲಿದೆ : ಇಸ್ರೋ ಮುಖ್ಯಸ್ಥ

ಚಂದ್ರಯಾನ -2 ಮುಗಿದ ಅಧ್ಯಾಯವಲ್ಲ ಎಂದಿರುವ ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರು ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್​ ಲ್ಯಾಂಡರನ್ನು ಮತ್ತೊಮ್ಮೆ ಖಚಿತವಾಗಿ ಇಳಿಸಲಾಗುವುದು ಎಂದು ಶನಿವಾರ ಹೇಳಿದ್ದಾರೆ.

ನವದೆಹಲಿ: ಚಂದ್ರಯಾನ -2 ಮುಗಿದ ಅಧ್ಯಾಯವಲ್ಲ ಎಂದಿರುವ ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರು ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್​ ಲ್ಯಾಂಡರನ್ನು ಮತ್ತೊಮ್ಮೆ ಖಚಿತವಾಗಿ ಇಳಿಸಲಾಗುವುದು ಎಂದು ಶನಿವಾರ ಹೇಳಿದ್ದಾರೆ.

ಇಸ್ರೋ ಚಂದ್ರನ ಕ್ಷಿಣ ಧ್ರುವದಲ್ಲಿ ವಿಕ್ರಮ ಲ್ಯಾಂಡರ್ ಅನ್ನು ಇಳಿಸುವ ಮತ್ತೊಂದು ಪ್ರಯತ್ನ ಮಾಡಲಿದೆಯೇ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶವನ್ ಅವರು, ಖಂಡಿತವಾಗಿಯೂ ಮಾಡುತ್ತೇವೆ ಎಂದಿದ್ದಾರೆ.

ವಿಕ್ರಮ್ ಲ್ಯಾಂಡರನ್ನು ಲ್ಯಾಂಡಿಂಗ್ ಮಾಡುವ ವಿಚಾರದಲ್ಲಿ ಟೆಕ್ನಾಲಜಿ ಬಳಕೆಯನ್ನು ಇನ್ನಷ್ಟು ಹರಿತಗೊಳಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಕೆಲಸವನ್ನು ನಾವು ಮುಂದುವರಿಸಿದ್ದೇವೆ. ಹೀಗಾಗಿ ಖಂಡಿತವಾಗಿ ಮುಂದಿನ ಪ್ರಯತ್ನದಲ್ಲಿ ಯಶಸ್ಸುಗಳಿಸಲಿದ್ದೇವೆ ಎಂದು ಶಿವನ್ ವಿಶ್ವಾಸ ವ್ಯಕ್ತಪಡಿಸಿದರು.

ಐಐಟಿ ದೆಹಲಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದ ಶಿವನ್ ಅವರು, 'ನೀವು ಎಲ್ಲರೂ ಚಂದ್ರಯಾನ್ -2 ಮಿಷನ್ ಬಗ್ಗೆ ಕೇಳಿದ್ದೀರಿ. ತಂತ್ರಜ್ಞಾನದ ಭಾಗದಲ್ಲಿ ನಮಗೆ ಮೃದು ಇಳಿಯುವಿಕೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ, ಆದರೆ ಎಲ್ಲಾ ವ್ಯವಸ್ಥೆಗಳು ಚಂದ್ರನ ಮೇಲ್ಮೈಯಿಂದ 300 ಮೀಟರ್ ವರೆಗೆ ಕಾರ್ಯನಿರ್ವಹಿಸುತ್ತಿದ್ದವು. ಈಗ ವಿಷಯಗಳನ್ನು ಸರಿಯಾಗಿ ಹೊಂದಿಸಲು ಬಹಳ ಅಮೂಲ್ಯವಾದ ದತ್ತಾಂಶಗಳು ಲಭ್ಯವಿದೆ. ಮುಂದಿನ ದಿನಗಳಲ್ಲಿ ವಿಷಯಗಳನ್ನು ಸರಿಯಾಗಿ ಹೊಂದಿಸಲು ಮತ್ತು ಮೃದು ಇಳಿಯುವಿಕೆಯನ್ನು ಪ್ರದರ್ಶಿಸಲು ಇಸ್ರೋ ತನ್ನ ಎಲ್ಲ ಅನುಭವ, ಜ್ಞಾನ ಮತ್ತು ತಾಂತ್ರಿಕ ಪರಾಕ್ರಮವನ್ನು ಧಾರೆ ಎರೆಯಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT