ದೇಶ

ದೆಹಲಿಯಲ್ಲಿ ಮುಂದುವರಿದ ವಾಯುಮಾಲಿನ್ಯ ದಟ್ಟಣೆ: ಶಾಲೆ ಪುನರಾರಂಭ 

Sumana Upadhyaya

ನವದೆಹಲಿ: ರಾಜಧಾನಿ ದೆಹಲಿ ಸುತ್ತಮುತ್ತ ವಾಯುಮಾಲಿನ್ಯ ಗುಣಮಟ್ಟ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಈ ಮಧ್ಯೆ ಶಾಲೆ ಬುಧವಾರ ಪುನರಾರಂಭಗೊಂಡಿದೆ.


ಕಳೆದ ರಾತ್ರಿ ದೆಹಲಿಯ ವಾಯುಮಾಲಿನ್ಯ ಗುಣಮಟ್ಟ ಸೂಚ್ಯಂಕ 309 ಆಗಿದ್ದು ಮೊನ್ನೆ ಸೋಮವಾರಕ್ಕೆ ಹೋಲಿಸಿದರೆ ನಿನ್ನೆ ವಾಯುಮಾಲಿನ್ಯ ಸೂಚ್ಯಂಕ ಸ್ವಲ್ಪ ಕಡಿಮೆಯಾಗಿದೆ.


ವಾಯುಮಾಲಿನ್ಯ ಗುಣಮಟ್ಟ ಸೂಚ್ಯಂಕ 0-50ರ ಮಧ್ಯೆ ಇದ್ದರೆ ಉತ್ತಮ, 51ರಿಂದ 100ರ ಮಧ್ಯೆ ಇದ್ದರೆ ತೃಪ್ತಿಕರ, 101ರಿಂದ 200 ಮಧ್ಯೆ ಇದ್ದರೆ ಸಾಧಾರಣ, 201ರಿಂದ 300ರ ಮಧ್ಯೆ ಇದ್ದರೆ ತೀರಾ ಕಳಪೆ ಮತ್ತು 401ರಿಂದ 500ರ ಮಧ್ಯೆ ಇದ್ದರೆ ಗಂಭೀರ ಎಂದು ಪರಿಗಣಿಸಲಾಗುತ್ತದೆ.


ವಾಯುಮಾಲಿನ್ಯ ಗುಣಮಟ್ಟ ಸೂಚ್ಯಂಕ 500ಕ್ಕಿಂತ ಜಾಸ್ತಿಯಾದರೆ ಅತಿ ಗಂಭೀರ ವಿಭಾಗದಲ್ಲಿ ಸೇರ್ಪಡೆಯಾಗುತ್ತದೆ. ಇಂದು ಸಂಜೆ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಇಲ್ಲಿನ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

SCROLL FOR NEXT