ದೇಶ

ಸಿಎಂ, ವಿಐಪಿಗಳಿಗಾಗಿ 191 ಕೋಟಿ ರೂ. ಬೆಲೆಯ ಹೊಸ ವಿಮಾನ ಖರೀದಿಸಿದ ಗುಜರಾತ್ ಸರ್ಕಾರ

Lingaraj Badiger

ಅಹಮದಾಬಾದ್: ಗುಜರಾತ್ ಬಿಜೆಪಿ ಸರ್ಕಾರ ಕೊನೆಗೂ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ರಾಜ್ಯಪಾಲರು, ಉಪ ಮುಖ್ಯಮಂತ್ರಿಗಳಂತಹ ಗಣ್ಯರ ಪ್ರಯಾಣಕ್ಕಾಗಿ 191 ಕೋಟಿ ರೂಪಾಯಿ ಮೌಲ್ಯದ ಖಾಸಗಿ ವಿಮಾನವನ್ನು ಖರೀದಿಸಿದೆ.

ಐದು ವರ್ಷಗಳ ಹಿಂದೆಯೇ 'ಬೊಂಬಾರ್ಡಿಯರ್ ಚಾಲೆಂಜರ್ 650' ವಿಮಾನ ಖರೀದಿ ಪ್ರಕ್ರಿಯೆ ಆರಂಭವಾಗಿತ್ತು. ಇದೀಗ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ಎರಡು ವಾರಗಳಲ್ಲಿ ವಿಮಾನ ಡೆಲಿವರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೊಸ ವಿಮಾನ ಒಟ್ಟು 12 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದು, ಸುಮಾರು 7 ಸಾವಿರ ಕಿ.ಮೀ. ಹಾರಾಟ ಸಾಮಾರ್ಥ್ಯ ಹೊಂದಿದೆ. ಸದ್ಯ ಗುಜರಾತ್ ಸಿಎಂ ಹಾಗೂ ಇತರೆ ಗಣ್ಯರಾಗಿ ಬೀಚ್ ಕ್ರಾಫ್ಟ್ ಸೂಪರ್ ಕಿಂಗ್ ವಿಮಾನವನ್ನು ಬಳಸಲಾಗುತ್ತಿದ್ದು, ಈಗ ಮತ್ತೊಂದು ಹೊಸ ಖಾಸಗಿ ವಿಮಾನ ಖರೀದಿಸಲಾಗಿದೆ.

ಹೊಸ ವಿಮಾನ ಸಂಚಾರಕ್ಕೆ ಸಿದ್ಧವಾಗಲು ಇನ್ನು ಎರಡು ತಿಂಗಳು ಕಾಲವಕಾಶ ಬೇಕು. ಏಕೆಂದರೆ ಕಸ್ಟಮ್ಸ್, ಡಿಜಿಸಿಎ ಮತ್ತು ಇತರೆ ಪ್ರಾಧಿಕಾರಗಳಿಂದ ಅನುಮತಿ ಪಡೆಯುವ ಅಗತ್ಯ ಇದೆ ಎಂದು ಗುಜರಾತ್ ವಿಮಾನಯಾನ ನಿರ್ದೇಶಕ ಕ್ಯಾಪ್ಟನ್ ಅಜಯ್ ಚೌಹ್ವಾನ್ ಅವರು ಹೇಳಿದ್ದಾರೆ.

SCROLL FOR NEXT