ದೇಶ

ನಿಜವಾಗುತ್ತಾ ಕ್ಯಾ.ಅಮರಿಂದರ್ ಸಿಂಗ್, ಗುಪ್ತಚರ ಇಲಾಖೆಯ ಆತಂಕ? ಕರ್ತಾರ್ ಪುರದ ಹೆಸರಿನಲ್ಲಿ ಪಾಕ್ ಕುತಂತ್ರ!

Srinivas Rao BV

ನವದೆಹಲಿ: ಪಾಕಿಸ್ತಾನ ಕರ್ತಾರ್ ಪುರ ಕಾರಿಡಾರ್ ನ್ನು ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಮುಕ್ತವಾಗಿಸಿದೆ. ಈ ನಡುವೆ ಕರ್ತಾರ್ ಪುರ ಕಾರಿಡಾರ್ ನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ದುರುದ್ದೇಶಪೂರ್ವಕವಾಗಿ ಸಂಚು ರೂಪಿಸುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ. 

ಕರ್ತಾರ್ ಪುರ ಸಾಹಿಬ್ ಗೆ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸುವುದಕ್ಕಾಗಿ ಪಾಕ್ ಸರ್ಕಾರ ಹಾಡನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು, ನಾಯಕರ ಚಿತ್ರಗಳನ್ನು ಸೇರಿಸಿದೆ. ಇದು ಈಗ ಬಹುದೊಡ್ಡ ವಿವಾದವಾಗಿದೆ.

ಪಾಕಿಸ್ತಾನದ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವಾಲಯ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪ್ರತ್ಯೇಕತಾವಾದಿಗಳಾದ ಬಿಂದ್ರನ್ ವಾಲೆ, ಮೇಜರ್ ಜನರಲ್ ಶಾಬೆಗ್ ಸಿಂಗ್, ಅಮ್ರಿಕ್ ಸಿಂಗ್ ಖಾಲ್ಸ ಅವರ ಚಿತ್ರಗಳನ್ನು ಹಾಕಲಾಗಿದೆ. 

ಇದಕ್ಕೂ ಮುನ್ನ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಾಕಿಸ್ತಾನ ಕರ್ತಾರ್  ಪುರ ಕಾರಿಡಾರ್ ನ್ನು ಪಂಜಾಬ್ ನಲ್ಲಿ ಸಿಖ್ ಉಗ್ರರ ಉಪಟಳ ಹೆಚ್ಚಿಸುವುದಕ್ಕಾಗಿ ದುರ್ಬಳಕೆ ಮಾಡಿಕೊಳ್ಳಬಹುದೆಂದು ಆತಂಕ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಪಾಕಿಸ್ತಾನ ಕರ್ತಾರ್ ಪುರ ಕಾರಿಡಾರ್ ನ್ನು ಮುಕ್ತವಾಗಿರಿಸುವುದರ ಹಿಂದಿನ ಉದ್ದೇಶವನ್ನು ಹಲವು ಗುಪ್ತಚರ ಇಲಾಖೆಗಳು ಪ್ರಶ್ನಿಸಿದ್ದವು. 

ಇದಕ್ಕೆ ಪೂರಕವಾಗಿ ಪಾಕ್ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸುವ ಹಾಡಿನಲ್ಲಿ ಖಾಲಿಸ್ತಾನ ಪ್ರತ್ಯೇಕತಾವಾದಿಗಳ ಭಾವಚಿತ್ರಗಳನ್ನು ಹಾಕಿದೆ.
 

SCROLL FOR NEXT