ಚಿ ವಿಜಯಾ ರೆಡ್ಡಿ 
ದೇಶ

ಹೈದರಾಬಾದ್: ಕಚೇರಿಯಲ್ಲೇ  ಮಹಿಳಾ ತಹಶೀಲ್ದಾರ್‌ಗೆ ಬೆಂಕಿ ಇಟ್ಟಿದ್ದ ವ್ಯಕ್ತಿ ಸಾವು

ಮಹಿಳಾ ತಹಶೀಲ್ದಾರ್ ಚಿ ವಿಜಯಾ ರೆಡ್ಡಿ ಅವರಿಗೆ ಬೆಂಕಿ ಇಟ್ಟು ಸಜೀವ ದಹನ ಮಾಡಿದ್ದ ಆರೋಪಿ ಕುರಾ ಸುರೇಶ್ ಗುರುವಾರ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ನಿಧನನಾಗಿದ್ದಾನೆ.

ಹೈದರಾಬಾದ್: ಮಹಿಳಾ ತಹಶೀಲ್ದಾರ್ ಚಿ ವಿಜಯಾ ರೆಡ್ಡಿ ಅವರಿಗೆಅವರ ಕಚೇರಿಯಲ್ಲೇ ಬೆಂಕಿ ಇಟ್ಟು ಸಜೀವ ದಹನ ಮಾಡಿದ್ದ ಆರೋಪಿ ಕುರಾ ಸುರೇಶ್ ಗುರುವಾರ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ನಿಧನನಾಗಿದ್ದಾನೆ.

ಸುರೇಶ್ ಸೋಮವಾರ ಅಬ್ದುಲ್ಲಾಪುರಮೆಟ್ ನಲ್ಲಿನ ತಹಶೀಲ್ದಾರ್ ಕಚೇರಿಗೆ ತೆರಳಿ, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ್ದನು. ಆ ಬೆಂಕಿ ಕೆನ್ನಾಲಿಗೆಗೆ ಸಿಕ್ಕಿದ ಮಹಿಳಾ ಅಧಿಕಾರಿಯ ಚಾಲಕ ಗುರುನಾಥಮ್  ಸಹ ಸುಟ್ಟ ಗಾಯದೊಡನೆ ಆಸ್ಪತ್ರೆಗೆ ಸೇರಿದ್ದಲ್ಲದೆ ಅಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದನು.

ವಿಜಯಾ ರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ಆರೋಪಿ ಸುರೇಶ್ ಸಹ ಶೇಕಡಾ 65 ಕ್ಕೂ ಹೆಚ್ಚು ಸುಟ್ಟಗಾಯಗಳಿಂದ ಬಳಲುತ್ತಿದ್ದು, ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಕಡೆಗೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ 3.30 ರ ಸುಮಾರಿಗೆ ಅಸುನೀಗಿದ್ದಾನೆ. 

ರಂಗಾರೆಡ್ಡಿ  ಜಿಲ್ಲೆಯ ಗೌರೆಲ್ಲಿ ಗ್ರಾಮದಲ್ಲಿ ತನ್ನ ಕುಟುಂಬದೊಂದಿಗೆ ಭೂ ವಿವಾದವನ್ನು ಹೊಂದಿದ್ದ ಸುರೇಶ್ ತಹಶೀಲ್ದಾರ್ ಅವರನ್ನು ಅದೇ ದ್ವೇಷದ ಹಿನ್ನೆಲೆಯಲ್ಲಿ ಸುಟ್ಟು ಹಾಕಿದ್ದ ಎಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ