ದೇಶ

ಚುನಾವಣಾ ಆಯೋಗಕ್ಕೆ ಖದರು ತಂದಿದ್ದ ದಕ್ಷ ಅಧಿಕಾರಿ ಟಿಎನ್ ಶೇಷನ್ ನಿಧನ 

Srinivas Rao BV

ಚುನಾವಣಾ ಆಯೋಗಕ್ಕೆ ಎಂಥಹ ತಾಕತ್ತು ಇದೆ ಎಂಬುದನ್ನು ತೋರಿಸಿಕೊಟ್ಟಿದ್ದ ಖಡಕ್ ಅಧಿಕಾರಿ ತಿರುನೆಲ್ಲಿ ನಾರಾಯಣ ಅಯ್ಯರ್ ಶೇಷನ್ ಇಹಲೋಕ ತ್ಯಜಿಸಿದ್ದಾರೆ. 

ಡಿ.12, 1990 ರಿಂದ ಡಿ.11, 1996 ವರೆಗೆ ಟಿಎನ್ ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. 87 ವರ್ಷದ ಶೇಷನ್ 1995 ರ  ಬ್ಯಾಚ್ ನ ತಮಿಳುನಾಡು ಕೇಡರ್ ನ  ಐಎಎಸ್ ಅಧಿಕಾರಿಯಾಗಿದ್ದರು. 1989 ರಲ್ಲಿ 18 ನೇ ಸಂಪುಟ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಅದ್ಭುತವಾದ ಸರ್ಕಾರಿ ಸೇವೆಗಾಗಿ 1996 ರಲ್ಲಿ ಶೇಷನ್ ಅವರಿಗೆ ರಾಮೊನ್ ಮ್ಯಾಗ್ಸಸೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 

1932 ರ ಡಿಸೆಂಬರ್ ನಲ್ಲಿ ಕೇರಳದ ಪಾಲ್ಲಕ್ಕಾಡ್ ನ ತಿರುನೆಲ್ಲಿಯಲ್ಲಿ ಜನಿಸಿದ್ದ  ಶೇಷನ್, ಭೌತಶಾಸ್ತ್ರ ದ ವಿಷಯದಲ್ಲಿ ಪದವಿ ಪಡೆದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಡೆಮಾನ್ಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಐಎಎಸ್ ನಲ್ಲಿ ತೇರ್ಗಡೆ ಹೊಂದಿ ಭಾರತೀಯ ಆಡಳಿತ ಸೇವೆಗೆ ಸೇರಿದ್ದರು. 

ಹಾರ್ವರ್ಡ್ ವಿವಿಯಲ್ಲೂ ವ್ಯಾಸಂಗ ಮಾಡಿದ್ದ ಶೇಷನ್, ಎಡ್ವರ್ಡ್ ಎಸ್ ಮೇಸನ್ ಫೆಲೋಶಿಪ್ ಮೂಲಕ ಪೌರಾಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು.

SCROLL FOR NEXT