ದೇಶ

ಕುಖ್ಯಾತ ಮಾವೋವಾದಿ ಕುಂದನ್ ಪಹನ್‌ಗೆ ಜೈಲಿನಿಂದಲೇ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ನೀಡಿದ ಎನ್‌ಐಎ

Srinivas Rao BV

ರಾಂಚಿ: ಕುಖ್ಯಾತ ಮಾವೋವಾದಿ ಕುಂದನ್ ಪಹಾನ್ ಗೆ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎನ್‌ಐಎ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ಕುಂದನ್ ಪಹಾನ್ ಮಾಜಿ ಸಚಿವ ರಮೇಶ್ ಸಿಂಗ್ ಮುಂಡಾ ಅವರ ಹತ್ಯೆ ಸೇರಿದಂತೆ 120 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. 

ಕುಂದನ್ ಪಹಾನ್ ಪರ ವಕೀಲರು ತಾಮರ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅನುಮತಿ ಕೋರಿ ಎನ್ಐಎ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಶೇಷ ಎನ್‌ಐಎ ನ್ಯಾಯಾಧೀಶ ನವನೀತ್ ಕುಮಾರ್ ಅವರು ಆರೋಪಿ ಪಹಾನ್‌ ಗೆ ನವೆಂಬರ್ 15 ರಂದು ನಾಮಪತ್ರ ಸಲ್ಲಿಸಲು ಅನುಮತಿ ನೀಡಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಪ್ರಸ್ತುತ ಹಜಾರಿಬಾಗ್ ಜೈಲಿನಲ್ಲಿರುವ ಕುಂದನ್ ಪಹಾನ್ ಚುನಾವಣೆಯಲ್ಲಿ ಪ್ರಸ್ತುತ ಜೈಲಿನಲ್ಲಿರುವ ರಾಜ ಪೀಟರ್ ಎಂಬಾತನ ವಿರುದ್ಧ ತಾಮರ್ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾನೆ.

SCROLL FOR NEXT