ಪೊಲೀಸ್ ಠಾಣೆಯ ಹತ್ತಿರವೆ ಮಹಿಳೆ ಮೇಲೆ ರೇಪ್ ಯತ್ನ, ಅತ್ಯಾಚಾರಿಯಿಂದ ರಕ್ಷಿಸಬೇಕಾದ ಸಾರ್ವಜನಿಕರಿಂದಲೇ ರೇಪ್! 
ದೇಶ

ಪೊಲೀಸ್ ಠಾಣೆಯ ಹತ್ತಿರವೆ ಮಹಿಳೆ ಮೇಲೆ ರೇಪ್ ಯತ್ನ, ಅತ್ಯಾಚಾರಿಯಿಂದ ರಕ್ಷಿಸಬೇಕಾದ ಸಾರ್ವಜನಿಕರಿಂದಲೇ ರೇಪ್!

ಪೊಲೀಸ್ ಠಾಣೆಯ ಹತ್ತಿರವೇ ಇದ್ದ ಪಾರ್ಕ್ ನಲ್ಲಿ 21 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆರುವ ಘಟನೆ ನೋಯ್ಡಾದಲ್ಲಿ ವರದಿಯಾಗಿದೆ. 

ನೋಯ್ಡಾ: ಪೊಲೀಸ್ ಠಾಣೆಯ ಹತ್ತಿರವೇ ಇದ್ದ ಪಾರ್ಕ್ ನಲ್ಲಿ 21 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆರುವ ಘಟನೆ ನೋಯ್ಡಾದಲ್ಲಿ ವರದಿಯಾಗಿದೆ. 

ರಫ್ತಿ ಕಂಪನಿಯಲ್ಲಿ ಜವಾನ(ಪಿಯೋನ್) ನಾಗಿ ಕಾರ್ಯನಿರ್ವಹಿಸುತ್ತಿದ್ದ ರವಿ ಎಂಬಾತ ಮಹಿಳೆಗೆ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಈ ಬಗ್ಗೆ ಚರ್ಚಿಸುವುದಕ್ಕಾಗಿ ರಾತ್ರಿ 8:30ಕ್ಕೆ ಭೇಟಿ ಮಾಡುವಂತೆ ಹೇಳಿದ್ದಾನೆ. ಯುವತಿ ಅಲ್ಲಿ ತೆರಳಿದಾಗ ಆಕೆಯನ್ನು ಸೆಕ್ಟರ್ 63 ಯ ಪೊಲೀಸ್ ಠಾಣೆಯ ಬಳಿ ಇರುವ ಪಾರ್ಕ್ ಗೆ ಕರೆದೊಯ್ದು  ಯುವತಿ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ ಇದನ್ನು ಪ್ರತಿಭಟಿಸಿದ ಯುವತಿ ಕೂಗಿಕೊಂಡಿದ್ದಾಳೆ. ಇದನ್ನು ಕೇಳಿಸಿಕೊಂಡಾ ಹತ್ತಿರದಲ್ಲೇ ಇದ್ದ ಗುಡ್ಡು ಮತ್ತು ಶಾಮು ಸ್ಥಳಕ್ಕೆ ಧಾವಿಸಿ, ಅತ್ಯಾಚಾರವೆಸಗಲು ಯತ್ನಿಸುತ್ತಿದ್ದ ರವಿ ಮೇಲೆ ಹಲ್ಲೆ ನಡೆಸಿದ್ದಾರೆ, ತಕ್ಷಣವೇ ರವಿ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಯುವತಿಯನ್ನು ರಕ್ಷಿಸಬೇಕಿದ್ದ ಆ ಇಬ್ಬರು ಆಕೆಯನ್ನು ಮತ್ತೊಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಅಷ್ಟೇ ಅಲ್ಲದೇ ತಮ್ಮ ಇತರ ಮೂವರು ಸ್ನೇಹಿತರನ್ನೂ ಕರೆದಿದ್ದಾರೆ. ಪರಿಣಾಮ ಬ್ರಿಜ್ ಕಿಶೋರ್, ಪಿತಾಂಬರ್, ಉಮೇಶ್ ಎಂಬುವವರೂ ಆ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. 

ಸರಣಿ ಅತ್ಯಾಚಾರ ಹಾಗೂ ಹಲ್ಲೆಯಿಂದ ಯುವತಿಗೆ ರಕ್ತಸ್ರಾವವಾಗುತ್ತಿತ್ತು. ಆಕೆ ಹತ್ತಿರದಲ್ಲೇ ಇದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ಪ್ರಾಣ ಅಪಾಯದಿಂದ ಪಾರಾಗಿದ್ದಾಳೆ ಆದರೆ ನಡೆದಿರುವ ಘಟನೆಯಿಂದ ಮಾನಸಿಕವಾಗಿ ಕುಗ್ಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. 

ಅತ್ಯಾಚಾರವೆಸಗಿರುವ ಐವರ ಪೈಕಿ ಮೂವರನ್ನು ಹಾಗೂ ಅತ್ಯಾಚಾರಕ್ಕೆ ಯತ್ನಿಸಿದ ರವಿ ಎಂಬಾತನನ್ನು ಬಂಧಿಸಲಾಗಿದ್ದು, ಗುಡ್ಡು, ಶಾಮುಗಾಗಿ ಪೊಲೀಸರು ಶೋಧಕಾರ್ಯಾಚರಣೆಯಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!