ದೇಶ

ವಿಶೇಷ ಭದ್ರತೆ ಹಿಂತೆಗೆತ: ಲೋಕಸಭೆಯಲ್ಲಿ ಕಾಂಗ್ರೆಸ್ ನಿಂದ ನಿಲುವಳಿ ಸೂಚನೆ 

Sumana Upadhyaya

ನವದೆಹಲಿ: ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ವಿಶೇಷ ರಕ್ಷಣಾ ಪಡೆ(ಎಸ್ ಪಿಜಿ)ಯನ್ನು ಹಿಂತೆಗೆದುಕೊಂಡಿರುವುದನ್ನು ಪ್ರಶ್ನಿಸಿ ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ನೊಟೀಸ್ ನೀಡಿದೆ.


ಗಾಂಧಿ ಕುಟುಂಬಕ್ಕೆ ಇರುವ ಸಾಧ್ಯತಾ ಬೆದರಿಕೆಗಳನ್ನು ನಿರಾಕರಿಸಿ ವಿಶೇಷ ಭದ್ರತೆಯನ್ನು ಹಿಂತೆಗೆದುಕೊಂಡಿರುವ ಕೇಂದ್ರ ಸರ್ಕಾರದ ಕ್ರಮ ನಿರಂಕುಶ ಆಡಳಿತ ಕ್ರಮವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ನೊಟೀಸ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.
ನಿಲುವಳಿ ಸೂಚನೆಯಲ್ಲಿ ಸದನದ ಕಲಾಪವನ್ನು ನಿಲ್ಲಿಸಿ ಕಾಂಗ್ರೆಸ್ ಸೂಚನೆಯಲ್ಲಿ ಎತ್ತಿರುವ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುವಂತೆ ಒತ್ತಾಯಿಸಿತು.


ನಿನ್ನೆ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭದ ದಿನ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಲೋಕಸಭೆಯಲ್ಲಿ ವಿಶೇಷ ಭದ್ರತಾ ಪಡೆ ವ್ಯವಸ್ಥೆಯ ವಿಚಾರವನ್ನು ಎತ್ತಿದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ನೀಡಲಾಗಿದ್ದ ವಿಶೇಷ ಭದ್ರತೆ ವ್ಯವಸ್ಥೆಯನ್ನು ಹಿಂತೆಗೆದುಕೊಂಡಿರುವುದು ಕೇಂದ್ರ ಸರ್ಕಾರದ ನಿರಂಕುಶ ಆಡಳಿತವನ್ನು ತೋರಿಸುತ್ತದೆ ಎಂದರು.

SCROLL FOR NEXT