ದೇಶ

ಬಿಎಸ್ಎನ್ ಎಲ್ ವಿಆರ್ ಎಸ್ ಯೋಜನೆಗೆ ಅರ್ಜಿ ಹಾಕಿದವರು 77 ಸಾವಿರಕ್ಕೂ ಅಧಿಕ ಸಿಬ್ಬಂದಿ!

Sumana Upadhyaya

ನವದೆಹಲಿ: ಸ್ವಯಂ ನಿವೃತ್ತಿ ಯೋಜನೆ(ವಿಆರ್ ಎಸ್)ಗೆ ಭಾರತೀಯ ದೂರ ಸಂಚಾರ ನಿಗಮದ 77 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಮೊರೆ ಹೋಗಿದ್ದಾರೆ.


ದೇಶಾದ್ಯಂತ ಒಂದೂವರೆ ಲಕ್ಷಕ್ಕೂ ಅಧಿಕ ಬಿಎಸ್ಎನ್ ಎಲ್ ಸಿಬ್ಬಂದಿಯಿದ್ದು ಅವರಲ್ಲಿ ಸುಮಾರು 1 ಲಕ್ಷ ಬಿಎಸ್ಎನ್ಎಲ್ ನೌಕರರು ವಿಆರ್ ಎಸ್ ಯೋಜನೆಗೆ ಅರ್ಹರಾಗಿದ್ದಾರೆ. ಈಗಿರುವ ಯೋಜನೆಯಡಿ ವಿಆರ್ ಎಸ್ ಜಾರಿಗೆ ಬರುವುದು ಮುಂದಿನ ವರ್ಷ ಜನವರಿ 31 ಆಗಿದೆ.


ಇದುವರೆಗೆ ವಿಆರ್ ಎಸ್ ಯೋಜನೆಯನ್ನು ಆಯ್ಕೆ ಮಾಡಿಕೊಂಡ ಬಿಎಸ್ಎನ್ಎಲ್ ನೌಕರರ ಸಂಖ್ಯೆ 77 ಸಾವಿರಕ್ಕೂ ಅಧಿಕ ಆಗಿದೆ. 


ಬಿಎಸ್ಎನ್ಎಲ್ ಸ್ವಯಂ ನಿವೃತ್ತಿ ಯೋಜನೆ -2019 ಇತ್ತೀಚೆಗೆ ಆರಂಭವಾಗಿದ್ದು ಡಿಸೆಂಬರ್ 3ರವರೆಗೆ ಇರುತ್ತದೆ. 70 ಸಾವಿರದಿಂದ 80 ಸಾವಿರದವರೆಗೆ ಸಿಬ್ಬಂದಿಗಳು ಸ್ವಯಂ ನಿವೃತ್ತಿ ಘೋಷಿಸಿದರೆ ಸರ್ಕಾರಕ್ಕೆ 7 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತದೆ. 


ಈ ಯೋಜನೆಯಡಿ, ಬಿಎಸ್ ಎನ್ ಎಲ್ ನ ನಿಯೋಜನೆ ಆಧಾರದ ಉದ್ಯೋಗಿಗಳು ಸೇರಿದಂತೆ ಎಲ್ಲಾ ನಿಯಮಿತ ಮತ್ತು ಶಾಶ್ವತ ಉದ್ಯೋಗಿಗಳು 50 ವರ್ಷಕ್ಕೆ ಮೀರಿದವರು ಬಯಸಿದಲ್ಲಿ ಸ್ವಯಂ ನಿವೃತ್ತಿ ಪಡೆಯಬಹುದು. 

SCROLL FOR NEXT