ಮುಂಬೈ: ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮತ್ತು ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಾಪತ್ತೆಯಾಗಿದ್ದ ನಾಲ್ವರು ಎನ್ ಸಿಪಿ ಶಾಸಕರಲ್ಲಿ ಇಬ್ಬರು ಸೋಮವಾರ ಬೆಳಗ್ಗೆ ಮುಂಬೈಯ ಹಯಾಟ್ ಹೊಟೇಲ್ ಗೆ ತಲುಪಿದ್ದಾರೆ.
ಎನ್ ಸಿಪಿ ಶಾಸಕರಾದ ದೌಲಾತ್ ದರೊಡ ಮತ್ತು ಅನಿಲ್ ಪಾಟೀಲ್ ಅವರನ್ನು ಗುರಗ್ರಾಮ್ ನ ಹೊಟೇಲೊಂದರಲ್ಲಿ ಇಡಲಾಗಿತ್ತು. ನ್ಯಾಷನಲಿಸ್ಟ್ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಧೀರಜ್ ಶರ್ಮ ಮತ್ತು ನ್ಯಾಶನಲಿಸ್ಟ್ ಸ್ಟೂಡೆಂಟ್ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ದೂಹನ್ ಅವರು ಕಳೆದ ರಾತ್ರಿ ಮುಂಬೈಗೆ ಆಗಮಿಸಿದ್ದಾರೆ.
ಹಿಂತಿರುಗಿದ ಶಾಸಕರು ಶರದ್ ಪವಾರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಎನ್ ಸಿಪಿ ನಾಯಕ ನವಾಬ್ ಮಲಿಕ್ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ 52 ಶಾಸಕರು ಶರದ್ ಪವಾರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನೊಬ್ಬರು ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು.
ನಿನ್ನೆ ಸಂಜೆ ಎಲ್ಲಾ ಎನ್ ಸಿಪಿ ಶಾಸಕರು ಮುಂಬೈಯ ಹಯಾಟ್ ಹೊಟೇಲ್ ಗೆ ಭದ್ರತೆ ದೃಷ್ಟಿಯಿಂದ ವರ್ಗಾಯಿಸಲಾಗಿದೆ.