ದೇಶ

ಉದ್ಯೋಗದಲ್ಲಿ ಶೇ.80ರಷ್ಟು ಸ್ಥಳೀಯರಿಗೆ ಮೀಸಲು, ರೈತರ ಸಾಲ ಮನ್ನಾ: ಠಾಕ್ರೆ ಸರ್ಕಾರದ ಆಶ್ವಾಸನೆ

Lingaraj Badiger

ಮುಂಬೈ:  ‘ಮಹಾ ವಿಕಾಸ್‌ ಅಘಾಡಿ’ (ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌) ನಾಯಕ ಉದ್ಧವ್ ಠಾಕ್ರೆ ಅವರು ಗುರುವಾರ ಮಹಾರಾಷ್ಟ್ರ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.80ರಷ್ಟು ಮೀಸಲಾತಿ, 1 ರೂಪಾಯಿ ಕ್ಲಿನಿಕ್, 10 ರೂಪಾಯಿಗೆ ಊಟ ತಿಂಡಿ ಹಾಗೂ ರೈತರ ಸಾಲ ಮನ್ನಾ ಮಾಡುವ ಆಶ್ವಾಸನೆ ನೀಡಿದೆ.

ಮಹಾ ವಿಕಾಸ್ ಅಘಾಡಿ ಹೆಸರಿನ ಮೈತ್ರಿ ಸರ್ಕಾರ ಇಂದು ರಚನೆಯಾಗಿದ್ದು, ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಒಂದು ಗಂಟೆಗೂ ಮುನ್ನ ನಾಲ್ಕು ಪುಟಗಳ ಸಾಮಾನ್ಯ ಕನಿಷ್ಠ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಪಟ್ಟಿಯಲ್ಲಿ, ಚುನಾವಣೆ ವೇಳೆ ನೀಡಿದ ಭರವಸೆಯಂತೆ ರೈತರ ಸಾಲ ಮನ್ನಾ. ಯುವಕರಿಗೆ ಉದ್ಯೋಗ, ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.80ರಷ್ಟು ಮೀಸಲಾತಿ. 10 ರೂಪಾಯಿ ಆಹಾರ ನೀಡುವುದು ಸೇರಿದಂತೆ ಹಲವು ಆಶ್ವಾಸನೆ ನೀಡಲಾಗಿದೆ.

ಈ ಯೋಜನೆಯ ಅಂಶಗಳ ಅನುಷ್ಠಾನಕ್ಕೆ ಎರಡು ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ. ಒಂದು ರಾಜ್ಯ ಸಂಪುಟದೊಳಗಿನದ್ದು, ಮತ್ತೊಂದು ಇಡೀ ಮೈತ್ರಿಯನ್ನು ಒಳಗೊಂಡ ಸಮನ್ವಯ ಸಮಿತಿಯಾಗಿದೆ.

SCROLL FOR NEXT