ಸೆಕ್ಸ್ಗೆ ಒಪ್ಪದಿದ್ದಾಗ ಚಿನ್ಮಯಾನಂದ್ ಸಂತ್ರಸ್ತೆ ಮೈಮೇಲಿನ ಬಟ್ಟೆಗಳನ್ನು ಹರಿಯುತ್ತಿದ್ದ: ಕೌನ್ಸಿಲ್
ಸೆಕ್ಸ್ಗೆ ಒಪ್ಪದಿದ್ದಾಗ ಸಂತ್ರಸ್ತೆ ಮೈಮೇಲೆ ಧರಿಸಿದ್ದ ಬಟ್ಟೆಗಳನ್ನು ಚಿನ್ಮಯಾನಂದ್ ಹರಿದು ಹಾಕುತ್ತಿದ್ದರು ಎಂದು ಜಿಲ್ಲಾ ಸರ್ಕಾರಿ ವಕೀಲ ಅರ್ಜುನ್ ಸಿಂಗ್ ಕೋರ್ಟ್ ಗೆ ತಿಳಿಸಿದ್ದಾರೆ.
ಶಹಜಾನ್ ಪುರ್: ಸೆಕ್ಸ್ಗೆ ಒಪ್ಪದಿದ್ದಾಗ ಸಂತ್ರಸ್ತೆ ಮೈಮೇಲೆ ಧರಿಸಿದ್ದ ಬಟ್ಟೆಗಳನ್ನು ಚಿನ್ಮಯಾನಂದ್ ಹರಿದು ಹಾಕುತ್ತಿದ್ದರು ಎಂದು ಜಿಲ್ಲಾ ಸರ್ಕಾರಿ ವಕೀಲ ಅರ್ಜುನ್ ಸಿಂಗ್ ಕೋರ್ಟ್ ಗೆ ತಿಳಿಸಿದ್ದಾರೆ.
ಅತ್ಯಾಚಾರ ಆರೋಪ ಎದುರಿಸುತ್ತಿರುವ ಚಿನ್ಮಯಾನಂದ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಮುಂದೆ ಅರ್ಜುನ್ ಸಿಂಗ್, ಅತ್ಯಾಚಾರ ಸಂತ್ರಸ್ತೆ ಈ ಕುರಿತು ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಚಿನ್ಮಯಾನಂದ್ ಅವರ ದಿವ್ಯ ಧಾಮಕ್ಕೆ ಸಂತ್ರಸ್ತೆ ಬರುತ್ತಿದ್ದರು ಎಂದು ಭದ್ರತಾ ಸಿಬ್ಬಂದಿ ಹೇಳಿಕೆ ನೀಡಿದ್ದು ಈ ಬಗ್ಗೆ ಎಸ್ಐಟಿ ದಾಖಲೆಗಳನ್ನು ಸಲ್ಲಿಸಿವೆ ಎಂದು ತಿಳಿಸಿದರು.
ಇದೇ ವೇಳೆ ಚಿನ್ಮಯಾನಂದ್ ಅವರಿಗೆ ಜಾಮೀನು ನೀಡದಂತೆ ಅರ್ಜುನ್ ಸಿಂಗ್ ಮನವಿ ಮಾಡಿದರು. ಸಂತ್ರಸ್ತೆ ಮೇಲೆ ಚಿನ್ಮಯಾನಂದ್ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. ಸೆಕ್ಸನ್ 161 ಹಾಗೂ 164ರ ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ಸಂತ್ರಸ್ತೆ ಎಲ್ಎಲ್ಎಂ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದು ಅದೇ ಕಾಲೇಜಿನ ಕಂಪ್ಯೂಟರ್ ಲ್ಯಾಬ್ ನಲ್ಲಿ ಕೆಲಸವನ್ನೂ ಮಾಡುತ್ತಿದ್ದಾರೆ. ಆದರೆ ಆಕೆಯನ್ನು ಆಗಾಗ್ಗೆ ದಿನ ಧಾಮಕ್ಕೆ ಕರೆಸಿಕೊಳ್ಳಲಾಗುತ್ತಿತ್ತು. ದಿವ್ಯ ಧಾಮ ಶಿಕ್ಷಣ ಸಂಸ್ಥೆ ಅಲ್ಲ ಎಂದು ಅರುಣ್ ಸಿಂಗ್ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.