ದೇಶ

ನಮ್ಮ ಸ್ನೇಹವನ್ನು ನೆನಪಿಸಿಕೊಳ್ಳಿ, ಕಾಶ್ಮೀರ ಕುರಿತು ಹೇಳಿಕೆ ನೀಡುವುದನ್ನು ಬಿಟ್ಟುಬಿಡಿ: ಮಲೇಷಿಯಾಗೆ ಭಾರತ ಖಡಕ್ ಪ್ರತಿಕ್ರಿಯೆ

Raghavendra Adiga

ನವದೆಹಲಿ: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಇತ್ತೀಚಿನ ಅಧಿವೇಶನದಲ್ಲಿ ಮಲೇಷಿಯಾ ಕಾಶ್ಮೀರ ವಿಚಾರವಾಗಿ ಮಾತನಾಡಿದ ಬಗೆಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಯಿಸಿದೆ. ಭಾರತ-ಮಲೇಷಿಯಾ ನಡುವೆ ಉತ್ತಮ ಸ್ನೇಹ ಸೌಹಾರ್ದವಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಮಲೇಷಿಯಾ ಅಂತಹ ಹೇಳಿಕೆಗಳಿಂದ ದೂರವಿರಬೇಕು ಎಂದು ಭಾರತ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

"ಜಮ್ಮು ಮತ್ತು ಕಾಶ್ಮೀರವು ಇತರ ಎಲ್ಲ ರಾಜ ಸಂಸ್ಥೆಗಳಂತೆ ಭಾರತದ ಅಂಗವಾಗುವುದಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು.  ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ. ಮಲೇಷಿಯಾ ಭಾರತದೊಂದಿಗಿರುವ ಉತ್ತಮ ಸ್ನೇಹ ಸಂಬಂಧವನ್ನು ಮನಸ್ಸಿನಲ್ಲಿಟ್ಟುಕೊಂಡು ಇಂತಹಾ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು"

ರವೀಶ್ ಕುಮಾರ್, ಕಾಶ್ಮೀರ ಭಾರತದ ಆಂತರಿಕ ವಿಷಯವಾಗಿದೆ. ಈ ಕುರಿತು ಮಿತ್ರ ದೇಶವಾಗಿರುವ ಟರ್ಕಿ ಆ.6ರಿಂದ ಪದೇ ಪದೆ ಹೇಳಿಕೆ ನೀಡುತ್ತಿರುವುದು ವಿಷಾದನೀಯ ಎಂದಿದ್ದಾರೆ.ಜಮ್ಮು ಕಾಶ್ಮೀರ ಮತ್ತು ಲಡಾಕ್ ಕುರಿತ ನಿರ್ಧಾರ ದೇಶದ ಆಂತರಿಕ ವಿಷಯವಾಗಿದ್ದು, ಅದರಲ್ಲಿ ಯಾವುದೇ ಮೂರನೇ ರಾಷ್ಟ್ರದ ಹೇಳಿಕೆಯನ್ನು ಪರಿಗಣಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಲೇಶಿಯಾ ಪ್ರಧಾನಿ ಮಹಥಿರ್ ಮೊಹಮ್ಮದ್ ಅವರು ಜಮ್ಮು ಕಾಶ್ಮೀರದ ಕುರಿತು ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

SCROLL FOR NEXT