ದೇಶ

'ಗಾಳಿ ವಿರುದ್ಧ ಕೇಸ್ ದಾಖಲಿಸಿ': ಬ್ಯಾನರ್ ಬಿದ್ದು ಟೆಕ್ಕಿ ಸಾವಿಗೆ ಎಐಎಡಿಎಂಕೆ ಮುಖಂಡನ ಹೇಳಿಕೆ!

Vishwanath S

ಚೆನ್ನೈ: ತಲೆ ಮೇಲೆ ಬ್ಯಾನರ್ ಬಿದ್ದು ಯುವತಿ  ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಮುಖಂಡ ಸಿ. ಪೊನ್ನಯನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಟೆಕ್ಕಿ ಶುಭಶ್ರೀ ರವಿ ಸಾವಿಗೆ ಕಾರಣವಾದ ಬ್ಯಾನರ್ ಬೀಳಲು ಗಾಳಿ ಕಾರಣ ಹೀಗಾಗಿ ಗಾಳಿಯ ಮೇಲೆ ಪ್ರಕರಣ ದಾಖಲಿಸಿ ಎಂದು ಸಿ. ಪೊನ್ನಯನ್ ಹೇಳಿದ್ದಾರೆ. 

ಎಐಎಡಿಎಂಕೆ ನಾಯಕ ಹಾಗೂ ಮಾಜಿ ಕೌನ್ಸಿಲರ್ ಜಯಗೋಪಾಲ್ ಅವರು ತಮ್ಮ ಪುತ್ರನ ಮದುವೆಗಾಗಿ ಅಳವಡಿಸಿದ್ದ ಬ್ಯಾನರ್ ಕುಸಿದುಬಿದ್ದು ಶುಭಶ್ರೀ ಮೃಪಟ್ಟಿದ್ದರು.  ಶುಭಶ್ರೀ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಬ್ಯಾನರ್ ಕುಸಿ ಬಿದ್ದಿದೆ. ಪರಿಣಾಮ ಶುಭಶ್ರೀ ಗಾಯಗೊಂಡು ಕೆಳಗೆ ಬಿದ್ದಿದ್ದಾಳೆ. ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ ಲಾರಿಯೊಂದು ಯುವತಿಯ ಮೇಲೆ ಹರಿದಿತ್ತು.

ಅನುಮತಿ ಪಡೆಯದೇ ಬ್ಯಾನರ್ ಹಾಕಿದ ಆರೋಪದ ಮೇಲೆ ಜಯಗೋಪಾಲ್ ಅವರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದಾರೆ. 

ಮದ್ರಾಸ್ ಹೈಕೋರ್ಟ್ ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ ಮತ್ತು ಮೃತ ಯುವತಿಯ ಪೋಷಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿತ್ತು.

SCROLL FOR NEXT