ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 
ದೇಶ

ಮಹಾಬಲಿಪುರಂನಲ್ಲಿ ಮೋದಿ-ಕ್ಸಿ ಶೃಂಗಸಭೆ: ಯಾವುದೇ ಒಪ್ಪಂದಗಳಿಗೆ ಸಹಿ ಇಲ್ಲ

 ಭಾರತ ಮತ್ತು ಚೀನಾ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಗೆ ತಮಿಳುನಾಡಿನ ಮಹಾಬಲಿಪುರಂ ಸಜ್ಜಾಗಿದೆ. ಅಕ್ಟೋಬರ್ 11-12ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. 

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಗೆ ತಮಿಳುನಾಡಿನ ಮಹಾಬಲಿಪುರಂ ಸಜ್ಜಾಗಿದೆ. ಅಕ್ಟೋಬರ್ 11-12ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಆದರೆ ಈ ವೇಳೆ ಯಾವುದೇ ನಿರ್ದಿಷ್ಟ ಕಾರ್ಯಸೂಚಿಯಾಗಲಿ, ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವುದಾಗಲಿ ಇರುವುದಿಲ್ಲ.

ಉಭಯ ನಾಯಕರ ನಡುವಿನ ಅನೌಪಚಾರಿಕ ಸಭೆಯು ಬಹುತೇಕ ಏಪ್ರಿಲ್ 2018 ರಲ್ಲಿ ಚೀನಾದಲ್ಲಿ ನಡೆದ ಮೊದಲ ಸಭೆಯಂತೆಯೇ ಇರುತ್ತದೆ ಎಂದು ಸರ್ಕಾರಿ ಮೂಲಗಳು ಎಎನ್‌ಐಗೆ ತಿಳಿಸಿವೆ.

ಯಾವುದೇ ನಿರ್ದಿಷ್ಟ ಕಾರ್ಯಸೂಚಿಯಿಲ್ಲದಿದ್ದರೂ  ಸಭೆಯ ಉದ್ದೇಶವು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವುದಾಗಿದೆ. ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ವಿಸ್ತಾರವಾದ ಮಾರ್ಗವನ್ನು ಕಂಡುಕೊಳ್ಳುವುದು ಮತ್ತು ಉಭಯ ದೇಶಗಳ ನಡುವೆ ಉತ್ತಮ ಸಂಪರ್ಕವನ್ನು ಬೆಳೆಸುವ ಮಾರ್ಗಗಳನ್ನು ಚರ್ಚಿಸುವುದು ಈ ಸಭೆಯ ಮುಖ್ಯ ಉದ್ದೇಶ ಎಂದು ಹೇಳಲಾಗಿದೆ.

ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳು, ಸೋಯಾಬೀನ್ ಮತ್ತು ಬಾಸ್ಮತಿ ಹೊರತಾದ ಅಕ್ಕಿಯ ಉತ್ಪನ್ನಗಳಿಗೆ ಮಾರುಕಟ್ಟೆಹೆಚ್ಚಳಗೊಳಿಸುವಿಕೆ  ಜೊತೆಗೆ ಭಯೋತ್ಪಾದನೆ, ಮಾಹಿತಿ ವಿನಿಮಯ,  ಭಯೋತ್ಪಾದನೆಯ ಮೂಲದ ಕುರಿತಂತೆಯೂ ಮಾತುಕತೆ ನಡೆಯಲಿಕ್ಕಿದೆ.

ಚೀನಾ ಅಧ್ಯಕ್ಷರು ಶುಕ್ರವಾರ ಮಧ್ಯಾಹ್ನ ನವದೆಹಲಿಗೆ ಆಗಮಿಸಲಿದ್ದಾರೆ.ಮೋದಿ ಅವರನ್ನು ವಿಶ್ವಪರಂಪರೆ ತಾಣ ಮಹಾಬಲಿಪುರಂಗೆ ಕರೆದೊಯ್ಯಲಿದ್ದಾರೆ.ಅಲ್ಲಿ ಕ್ಸಿ ಗಾಗಿ ವಿಶೇಷ ಭೋಜನವನ್ನು ಆಯೋಜಿಸಲಾಗಿದ್ದು ಸಾಂಸ್ಕೃತಿಕ ಪ್ರದರ್ಶನವೂ ನಡೆಯಲಿದೆ. ಮೇ ತಿಂಗಳಲ್ಲಿ ಎರಡನೇ ಅವಧಿಗೆ ಚುನಾಯಿತರಾದ ನಂತರ ಕ್ಸಿ ಮತ್ತು ಮೋದಿ ನಡುವಿನ ಮೂರನೇ ಸಭೆ ಇದಾಗಿದೆ. ಚೆನ್ನೈ ಬಳಿಯ ಸೀ ರೆಸಾರ್ಟ್ ನಲ್ಲಿ  ಉಭಯ ನಾಯಕರು ಪ್ರತ್ಯೇಕವಾಗಿಯೂ ಹಾಗೂ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT