ಸಂಗ್ರಹ ಚಿತ್ರ 
ದೇಶ

ಮೋದಿ-ಕ್ಸಿ ಜಿನ್‌ಪಿಂಗ್ ಭೇಟಿಗೆ ಮಹಾಬಲಿಪುರಂ ಆಯ್ಕೆ ಹಿಂದಿನ ರೋಚಕ ಸತ್ಯ ಏನು ಗೊತ್ತಾ?

ವುಹಾನ್ ಶೃಂಗಸಭೆ ಬಳಿಕ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿಯಾಗುತ್ತಿದ್ದು, ನಾಳೆ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಆಗಮಿಸಲಿದ್ದಾರೆ. 

ನವದೆಹಲಿ: ವುಹಾನ್ ಶೃಂಗಸಭೆ ಬಳಿಕ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿಯಾಗುತ್ತಿದ್ದು, ನಾಳೆ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಆಗಮಿಸಲಿದ್ದಾರೆ. 

ಕ್ಸಿ ಜಿನ್ ಪಿಂಗ್ ಭೇಟಿಗಾಗಿ ಭಾರತ ವಿದೇಶಾಂಗ ಇಲಾಖೆ ಈ ಬಾರಿ ದಕ್ಷಿಣ ಭಾರತವನ್ನು ಆಯ್ಕೆ ಮಾಡಿದ್ದು, ತಮಿಳುನಾಡಿನ ಖ್ಯಾತ ಪ್ರವಾಸಿ ತಾಣ ಮಹಾಬಲಿಪುರಂ ಅನ್ನು ಮೋದಿ-ಕ್ಸಿ ಭೇಟಿಗಾಗಿ ಆಯ್ಕೆ ಮಾಡಿದೆ. ಇನ್ನು ಅಧ್ಯಕ್ಷರ ಭೇಟಿಗೆ ಮಹಾಬಲಿಪುರಂ ಆಯ್ಕೆ ಹಿಂದೆ ಐತಿಹಾಸಿಕ ಅಂಶ ಅಡಗಿದ್ದು, ಚೀನಾಗೂ ಮಹಾಬಲಿಪುರಂಗೂ ಅವಿನಾಭಾವ ಸಂಬಂಧವಿದೆ.

  • ವಿಶ್ವಪರಂಪರೆ ಸ್ಥಾನವನ್ನು ಹೊಂದಿರುವ ಮಹಾಬಲಿಪುರಂ ಚೀನಾದೊಂದಿಗೆ ಐತಿಹಾಸಿಕ ಸಂಪರ್ಕವನ್ನು ಹೊಂದಿದ್ದು, 7ನೇ ಶತಮಾನದಲ್ಲಿ ಪಲ್ಲವ ರಾಜವಂಶದ ಅವಧಿಯಲ್ಲಿ ಚೀನಾದ ಬೌದ್ಧ ಸನ್ಯಾಸಿ ಕ್ಸುವಾನ್‌ಜಾಂಗ್ ಕಾಂಚಿಪುರಂಗೆ ಭೇಟಿ ನೀಡಿದ್ದರು ಮತ್ತು ಭೇಟಿಯ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ.
  • ಪಲ್ಲವ ಸಾಮ್ರಾಜ್ಯದ ಅವಧಿಯಲ್ಲಿ ಮಹಾಬಲಿಪುರಂ ಒಂದು ಪ್ರಮುಖ ಬಂದರು ನಗರವಾಗಿತ್ತು. ಜೈನ ಬೌದ್ಧಧರ್ಮವನ್ನು ಚೀನಾಕ್ಕೆ ಹರಡಿದ ಬೋಧಿಧರ್ಮಾ ತಮಿಳುನಾಡಿನ ಕರಾವಳಿಯಿಂದ ಪಯಣಿಸಿ ಇಂದಿನ ಗುವಾಂಗ್‌ಡಾಂಗ್ (ಕ್ಯಾಂಟನ್) ಪ್ರಾಂತ್ಯಕ್ಕೆ ಬಂದಿಳಿದಿದ್ದರು. ಅವರು ಇಳಿದ ಸ್ಥಳದಲ್ಲಿ ಈಗ ಒಂದು ಸಣ್ಣ ದೇವಾಲಯವನ್ನು ಕೂಡ ನಿರ್ಮಿಸಲಾಗಿದೆ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 2016 ರಲ್ಲಿ ಅಲ್ಲಿಗೆ ಭೇಟಿ ನೀಡಿದ್ದರು.
  • ವಿಶೇಷವಾಗಿ ಹಿಂದಿನಿಂದಲೂ ಈ ಪ್ರದೇಶದ ಚೀನಾದ ಆಗ್ನೇಯ ಕರಾವಳಿಯೊಂದಿಗೆ ದಕ್ಷಿಣ ಭಾರತದ ಪಲ್ಲವ ಮತ್ತು ಚೋಳ ಸಾಮ್ರಾಜ್ಯಗಳ ನಡುವೆ ಪ್ರಮುಖ ವ್ಯಾಪಾರ ಸಂಪರ್ಕವನ್ನು ಹೊಂದಿತ್ತು. ಇದಕ್ಕೆ ಇಂಬು ನೀಡುವಂತೆ ಚೀನಾದ ಸಾಂಗ್ ರಾಜವಂಶದ ನಾಣ್ಯಗಳು ಮತ್ತು ಕುಂಬಾರಿಕೆಗಳಂತಹ ಭೌತಿಕ ಸಾಕ್ಷ್ಯಗಳು ಮಹಾಬಲಿಪುರಂನಲ್ಲಿ ಪತ್ತೆಯಾಗಿವೆ.
  • ಚೀನಾದ ಸಾಂಗ್ ರಾಜವಂಶವು ಚೋಳ ಸಾಮ್ರಾಜ್ಯದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಉಳಿಸಿಕೊಂಡಿದ್ದನ್ನು ನಾವು ಇತಿಹಾಸದ ದಾಖಲೆಗಳ ಮೂಲಕ ತಿಳಿಯಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT