ದೇಶ

ಟೀಕೆಗಳಿಗೆ ಕ್ಯಾರೆ ಎನ್ನದ ಟಿಎಂಸಿ ಸಂಸದೆ! ದುರ್ಗಾಪೂಜೆ ಬಳಿಕ  'ಸಿಂದೂರ್ ಖೇಲಾ'ದಲ್ಲಿ ಭಾಗವಹಿಸಿದ ನುಸ್ರತ್ ಜಹಾನ್

Raghavendra Adiga

ಕೋಲ್ಕತ್ತಾ: ನವರಾತ್ರಿ ದುರ್ಗಾಪೂಜೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮುಸ್ಲಿಂ ಧರ್ಮಗುರುಗಳ ತೀವ್ರ ಟೀಕೆಗೆ ಈಡಾಗಿದ್ದ  ಟಿಎಂಸಿ ಸಂಸದೆ ಮತ್ತು ಚಲನಚಿತ್ರ ನಟಿ ನುಸ್ರತ್ ಜಹಾನ್ ಶುಕ್ರವಾರ ನಗರದಲ್ಲಿ ನಡೆದ 'ಸಿಂದೂರ್ ಖೇಲಾ' ಆಚರಣೆಯಲ್ಲಿ ಪಾಲ್ಗೊಂಡರು  ಆ ವೇಳೆ ತಾವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವುದಾಗಿ ಹೇಳಿದ್ದಾರೆ.

ವಿಜಯ ದಶಮಿ ಆಚರಣೆಯ ಅಂಗವಾಗಿ ಶುಕ್ರವಾರ ಸಂಜೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಸಮೂಹದಲ್ಲಿ ಪ್ರಸಿದ್ದವಾಗಿರುವ ಸಿಂದೂರ್ ಖೇಲಾ' ಆಚರ್ಣೆಯಲ್ಲಿ ನುಸ್ರತ್ ಭಾಗವಹಿಸಿದ್ದರು.

ರಾಜಕಾರಣಿಯಾಗಿ ಬಾಲಾಗಿರುವ ಬಂಗಾಳಿ ಚಲನಚಿತ್ರ ನಟಿ ಈ ವರ್ಷದ ಆರಂಭದಲ್ಲಿ ಉದ್ಯಮಿ ನಿಖಿಲ್ ಜೈನ್ ಅವರನ್ನು ಮದುವೆಯಾದಾಗಿನಿಂದ 'ಮಂಗಳಸೂತ್ರ' ಮತ್ತು 'ಸಿಂದೂರ” ದಂತಹಾ ಹಿಂದೂ ವೈವಾಹಿಕ ಚಿಹ್ನೆಗಗಳನ್ನು ಧರಿಸಿದ್ದಾರೆ. ಇದು ಅವರನ್ನು ಮುಸ್ಲಿಂ ಧರ್ಮಗುರುಗಳ ಕೆಂಗೆಣ್ಣಿಗೆ ಗುರಿಯಾಗಿಸಿದೆ.

ದುರ್ಗಾ ಪೂಜಾ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಈ ವಾರದ ಪ್ರಾರಂಭದಲ್ಲಿ  ಅವರು ಟೀಕೆಗೆ ಗುರಿಯಾಗಿದ್ದರು.ಇದೀಗ ಅವರು ಭಾಗವಹಿಸಿದ್ದ ಸಿಂದೂರ್ ಖೇಲಾ' ಐದು ದಿನಗಳ ಉತ್ಸವದ ಕೊನೆಯಲ್ಲಿ ದುರ್ಗಾ ದೇವಿಗೆ ಸಿಹಿತಿಂಡಿ ಮತ್ತು ಪ್ರಾರ್ಥನೆಗಳನ್ನು ಅರ್ಪಿಸಿದ ನಂತರ ವಿವಾಹಿತ ಮಹಿಳೆಯರು ಪರಸ್ಪರ ಸಿಂಧೂರವಿರಿಸಿಕೊಳ್ಳುವ ಆಚರಣೆಯಾಗಿದೆ. ಸೀರೆಯನ್ನುಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನುಸ್ರತ್ ಇತರ ಮಹಿಳೆಯರಿಗೆ ಸಿಂಧೂರ ಇಡುತ್ತಿದ್ದದ್ದು ಕಂಡುಬಂದಿತು. 

"ನಾನು ದೇವರ ವಿಶೇಷ ಮಗು. ನಾನು ಮಾನವೀಯತೆಯನ್ನು ಗೌರವಿಸುತ್ತೇನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ನಾನೀಗ ಬಹಳ ಸಂತೋಷವಾಗಿದ್ದೇನೆ. ಈ ವಿವಾದಗಳೆಲ್ಲಾ ನನಗೆ ಅಪ್ರಸ್ತುತ ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಮತ್ತು ಎಲ್ಲಾ ಹಬ್ಬಗಳನ್ನು ಆಚರಿಸುತ್ತೇನೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

SCROLL FOR NEXT