ದೇಶ

ಚೀನಾ ಅಧ್ಯಕ್ಷ ಕ್ಸೀ ಗೆ ಮೋದಿ ಕೊಟ್ರು ಅದ್ಧೂರಿ, ಅಪರೂಪದ ಗಿಫ್ಟ್: ಇಲ್ಲಿದೆ ವಿವರ 

Srinivas Rao BV

ಚೆನ್ನೈ: ಅನೌಪಚಾರಿಕ ಸಭೆಗಾಗಿ ತಮಿಳುನಾಡಿನ ಮಹಾಬಲಿಪುರಂ ಗೆ ಆಗಮಿಸಿದ್ದ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅದ್ಧೂರಿ, ಬೆಲೆ ಬಾಳುವ ಅಪರೂಪದ ಉಡುಗೊರೆಗಳನ್ನು ನೀಡಿದ್ದಾರೆ. 

ಮಧ್ಯಾಹ್ನ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ಸೀ ಜಿನ್ ಪಿಂಗ್ ಗೆ ಕೈಮಗ್ಗದ ರೇಷ್ಮೆಯಲ್ಲಿ ತಯಾರಿಸಲಾದ ಕ್ಸೀ ಜಿನ್ಪಿಂಗ್ ಅವರ ಭಾವಚಿತ್ರವನ್ನು ಅವರಿಗೇ ಉಡುಗೊರೆಯನ್ನಾಗಿ ನೀಡಿದ್ದಾರೆ. 

ಕೊಯಂಬತ್ತೂರಿನ ಸಿರುಮುಗೈಪುದುರ್ ನ ಶ್ರೀರಾಮಲಿಂಗ ಸೌದಂಬಿಗೈ ಹ್ಯಾಂಡ್ಲೂಮ್ ಕೊ-ಆಪರೇಟೀವ್ ಸೊಸೈಟಿ ಕ್ಸೀ ಜಿನ್ಪಿಂಗ್ ಅವರ ರೇಷ್ಮೆ ಭಾವಚಿತ್ರದ ತಯಾರಕರಾಗಿದ್ದಾರೆ. ಶುದ್ಧ ರೇಷ್ಮೆ ಹಾಗೂ ಜರಿ (ಬಂಗಾರದ ಸಣ್ಣ ಎಳೆ)ಗಳಿಂದ ಈ ಭಾವಚಿತ್ರವನ್ನು ತಯಾರಿಸಲಾಗಿದ್ದು, ಸತತ 5 ದಿನಗಳ ಪರಿಶ್ರಮ ಇದರ ಹಿಂದಿದೆ. 

ಕಂಚಿಪುರಂ, ಅರಾಣಿ, ಮಧುರೈ ಕೊಯಂಬತ್ತೂರು, ರಸಿಪುರಂ ಹೀಗೆ ತಮಿಳುನಾಡಿನ ಹಲವು ಪ್ರದೇಶಗಳು ರೇಷ್ಮೆಯ ಬಟ್ಟೆ, ಉತ್ಪನ್ನಗಳಿಗೆ ತಮಿಳುನಾಡು ಹೆಸರುವಾಸಿಯಾಗಿದೆ. 

ರೇಷ್ಮೆಯ ಭಾವಚಿತ್ರವಷ್ಟೇ ಅಲ್ಲದೇ ಪ್ರಧಾನಿ ಮೋದಿ ಕ್ಸೀ ಜಿನ್ಪಿಂಗ್ ಗೆ ಹಲವು ಹಂತಗಳಿರುವ ನವಿಲಿನ ಹಿಡಿ ಇರುವ ದೀಪಸ್ತಂಬಗಳನ್ನು, ಸರಸ್ವತಿ ನೃತ್ಯ ಮಾಡುತ್ತಿರುವ ತಂಜಾವೂರ್ ಚಿತ್ರಕಲೆಯನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. 
 

SCROLL FOR NEXT