ಸಂಜಯ್ ಗುಲಾಟಿ 
ದೇಶ

ಪಿಎಮ್‌ಸಿ ಬ್ಯಾಂಕ್ ಹಗರಣ: ಉಳಿತಾಯ ಹಿಂಪಡೆಯಲಾಗದೆ ಗ್ರಾಹಕ ಸಾವು, 24 ಗಂಟೆಗಳಲ್ಲಿ ಎರಡನೇ ಪ್ರಕರಣ

ಮುಲುಂಡ್ ಕಾಲೋನಿ ನಿವಾಸಿ ಮತ್ತು ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕಿನ ಠೇವಣಿದಾರರಾದಫತ್ತೋಮಲ್ ಪಂಜಾಬಿ (59) ಮಂಗಳವಾರ ಮಧ್ಯಾಹ್ನ 12.30 ಕ್ಕೆ ಹೃದಯಾಘಾತದಿಂದ ನಿಧನರಾದರು.ವಿಶೇಷವೆಂದರೆ ಕೇವಲ 24 ಗಂಟೆಗಳಲ್ಲಿ ಹೃದಯಾಘಾತದಿಂದ ಮೃತಪಟ್ಟ ಬ್ಯಾಂಕಿನ ಎರಡನೇ ಠೇವಣಿದಾರ ಇವರಾಗಿದ್ದಾರೆ.

ಮುಂಬೈ: ಮುಲುಂಡ್ ಕಾಲೋನಿ ನಿವಾಸಿ ಮತ್ತು ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕಿನ ಠೇವಣಿದಾರರಾದಫತ್ತೋಮಲ್ ಪಂಜಾಬಿ (59) ಮಂಗಳವಾರ ಮಧ್ಯಾಹ್ನ 12.30 ಕ್ಕೆ ಹೃದಯಾಘಾತದಿಂದ ನಿಧನರಾದರು.ವಿಶೇಷವೆಂದರೆ ಕೇವಲ 24 ಗಂಟೆಗಳಲ್ಲಿ ಹೃದಯಾಘಾತದಿಂದ ಮೃತಪಟ್ಟ ಬ್ಯಾಂಕಿನ ಎರಡನೇ ಠೇವಣಿದಾರ ಇವರಾಗಿದ್ದಾರೆ.

ಪಿಎಂಸಿ ಬ್ಯಾಂಕಿನ ಮುಲುಂಡ್ ಶಾಖೆಯಲ್ಲಿ ಖಾತೆ ಹೊಂದಿದ್ದ ಪಂಜಾಬಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆಯಲ್ಲಿ ಭಾಗವಹಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣದ ವಿತ್ ಡ್ರಾಗೆ  ಕಡಿವಾಣ ಹಾಕಿದ್ದರಿಂದ ತಾವು ಎದುರಿಸುತ್ತಿರುವ ಆರ್ಥಿಕ ತೊಂದರೆಗಳ ಬಗ್ಗೆ ಅವರು ಸ್ನೇಹಿತರಲ್ಲಿ ತಿಳಿಸಿದ್ದರು.

ಮೂಲಗಳ ಪ್ರಕಾರ, ಮುಲುಂಡ್ ಕಾಲೋನಿಯಲ್ಲಿ ವಾಸಿಸುವವರಲ್ಲಿ ಕನಿಷ್ಠ 95 ಪ್ರತಿಶತದಷ್ಟು ಜನರು ಹಗರಣದಲ್ಲಿ ಸಿಲುಕಿರುವ  ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿದ್ದಾರೆಂದು ನಂಬಲಾಗಿದೆ.

ಇದಕ್ಕೆ ಮುನ್ನ ಸೋಮವಾರ, ಪಶ್ಚಿಮ ಮುಂಬೈ ಉಪನಗರ ಓಶಿವಾರಾದ ತಪೋರ್ವಾಲಾ ಗಾರ್ಡನ್ಸ್ ನಿವಾಸಿ ಸಂಜಯ್ ಗುಲಾಟಿ ಹೃದಯಾಘಾತದಿಂದ ಮೃತಪಟ್ಟಿದ್ದರು.ಇಂಜಿನಿಯರ್ ಆಗಿದ್ದ 51 ವರ್ಷದ ಗುಲಾಟಿ  ಜೆಟ್ ಏರ್ವೇಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಕೆಲ ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದರು.  90 ಲಕ್ಷ ರೂ.ಗಳ ಉಳಿತಾಯದ ಹಣವನ್ನು  ಬ್ಯಾಂಕಿನಿಂದ ಹಿಂಪಡೆಯಲು ಸಾಧ್ಯವಾಗದ ಕಾರಣ ಅವರು ಹೃದಯಾಘಾತದಿಂದ ಅವರು ನಿಧನರಾಗಿದ್ದರು.

ಗುಲಾಟಿ ತಮ್ಮ 80 ವರ್ಷದ ತಂದೆಯೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಹೀಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲವೇ ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದಾರೆ. ಇನ್ನು ಗುಲಾಟಿ ಸಾವಿನ ಕೆಲವು ಗಂಟೆಗಳ ನಂತರ, ಆರ್‌ಬಿಐ ವಿತ್ ಡ್ರಾ ಮಿತಿಯನ್ನು 40,000 ರೂ.ಗೆ ಏರಿಸಿತು.ಗುಲಾಟಿಯ ಪರಿಚಯಸ್ಥ ಮತ್ತೊಬ್ಬ ಪಿಎಮ್‌ಸಿ ಖಾತೆದಾರ ಸಚಿ ಪೆಸ್ಟೊಂಜಿ ಇವರ ಸಾವಿನ ಬಗೆಗೆ ಆತಂಕ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಇದು ದುರಂತಗಳ ಸರಿಣಿಯ ಪ್ರಾರಂಭವಾಗಬಹುದು ಎಂದಿದ್ದಾರೆ.

ಹೌಸಿಂಗ್ ಡೆವಲಪ್‌ಮೆಂಟ್ & ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್) ಗೆ ಖಚಿತ, ದೃಢೀಕೃತ ದಾಖಲೆಗಳಿಲ್ಲದೆ ಸಾಲ ನೀಡಿದ ಕಾರಣ ಪಿಎಮ್‌ಸಿ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಬಂಧಕ್ಕೆ ಒಳಪಡಿಸಿತು.11,000 ಕೋಟಿ ರೂ.ಗಳ ಠೇವಣಿ ಹೊಂದಿರುವ ಬ್ಯಾಂಕಿನ ಚಿಂತೆಗೀಡಾದ ಠೇವಣಿದಾರರು ನಗರದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಹಣಕಾಸು ಸಚಿವರು ಕಳೆದ ವಾರ ಇಲ್ಲಿ ಚುನಾವಣಾ ಪೂರ್ವ ಮಾಧ್ಯಮ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ಹೊರಟಾಗಲೂ ಅವರ ಭೇಟಿಗೆ ಅನುವು ಮಾಡಿಕೊಡಲು ಒತ್ತಾಯಿಸಿದ್ದಾರೆ.

4,355 ಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ನ ಮಾಜಿ ಎಂಡಿ, ರಿಯಾಲ್ಟಿ ಸಂಸ್ಥೆಯ ಎಚ್‌ಡಿಐಎಲ್ ನ ಅಧಿಕಾರಿಗಳು ಸೇರಿದಂತೆ ನಾಲ್ವರನ್ನು ಇದುವರೆಗೆ ಬಂಧಿಸಿದ್ದಾರೆ.ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸುತ್ತಾ, ಠೇವಣಿದಾರರು ತಮ್ಮ ಹಣವನ್ನು ಮರಳಿ ಪಡೆಯಲು ಸಹಾಯ ಮಾಡುವಂತೆ ತಾವು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ತುರ್ತು ಕಾರಣ'ಗಳಿಂದಾಗಿ ಎಲ್ಲಾ ಅಧ್ವಾನವಾಯಿತು: ವಿಮಾನಗಳ ರದ್ದತಿ ಕುರಿತು IndiGo ಸ್ಪಷ್ಟನೆ

ಪಶ್ಚಿಮ ಬಂಗಾಳ: 'ಬಾಬರಿ ಮಸೀದಿ' ನಿರ್ಮಾಣದ ಪ್ಲಾನ್, TMC ಶಾಸಕ ಹುಮಾಯೂನ್ ಕಬೀರ್ ಅಮಾನತು, ಹೊಸ ಪಕ್ಷ ರಚನೆಯ ಘೋಷಣೆ!

ಕೆಂಪೇಗೌಡ ಏರ್ ಪೋರ್ಟ್ ಲ್ಲಿ 62 ವಿಮಾನ ಸೇರಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದು; ಕಾರಣವೇನು?: ತನಿಖೆ ಆರಂಭಿಸಿದ DGCA

ಸಂಚಾರಿ ಸಾಥಿ ಆ್ಯಪ್: ಮೋದಿ ಸರ್ಕಾರ 'ಯೂ ಟರ್ನ್', ಮಧ್ಯಮ ವರ್ಗದ ಜನರಿಗೆ ಸಿಕ್ಕ ಅಪರೂಪದ ಜಯ! ಹೇಗೆ?

ಎಲ್ಗರ್ ಪರಿಷತ್ ಪ್ರಕರಣ: 5 ವರ್ಷಗಳ ನಂತರ DU ಮಾಜಿ ಪ್ರಾಧ್ಯಾಪಕ ಹನಿ ಬಾಬುಗೆ ಜಾಮೀನು

SCROLL FOR NEXT