ದೇಶ

ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನ- ಗುಜರಾತ್, ತಮಿಳುನಾಡು ಮೊದಲ ಸ್ಥಾನದಲ್ಲಿ

Raghavendra Adiga

ನವದೆಹಲಿ: ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಒಂದಾದ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರುವಲ್ಲಿ ಗುಜರಾತ್,ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಮೊದಲ ಸಾಲಿನಲ್ಲಿವೆ.

ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದರು.

ಹತ್ತು ಕೋಟಿ ಕುಟುಂಬಗಳ ಸುಮಾರು ೫೦ ಕೋಟಿ ಜನರಿಗೆ ವಾರ್ಷಿಕವಾಗಿ ಐದು ಲಕ್ಷ ರೂ. ತನಕ ವಿಮೆ ಒದಗಿಸುವ ಆಯುಷ್ಮಾನ್ ಭಾರತ್ ಯೋಜನೆಯಡಿ ಕೇವಲ ೯ ತಿಂಗಳ ಅವಧಿಯಲ್ಲಿ ೭೯೦೧ ಕೋಟಿ ರೂಪಾಯಿಗಳನ್ನು ಬಡವರ ಆರೋಗ್ಯ ಸುಧಾರಣೆಗಾಗಿ ವೆಚ್ಚ ಮಾಡಲಾಗಿದೆ. 

SCROLL FOR NEXT