ದೇಶ

ಸಹೋದ್ಯೋಗಿಗಳ ಕಿರುಕುಳ: ಬಿಎಚ್‍ಇಎಲ್ ಮಹಿಳಾ ಉದ್ಯೋಗಿ ನೇಣಿಗೆ ಶರಣು

Raghavendra Adiga

ಹೈದರಾಬಾದ್: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ ಇಎಲ್) ಮಹಿಳಾ ಅಧಿಕಾರಿಯೊಬ್ಬರು ಸಹೋದ್ಯೋಗಿಗಳ ಕಿರುಕುಳಕ್ಕೆ ಬೇಸತ್ತು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಬಿಎಚ್ ಇಎಲ್ ಸಂಸ್ಥೆಯ 33 ವರ್ಷದ ಅಕೌಂಟ್ಸ್ ಅಧಿಕಾರಿ ಗುರುವಾರ ಮಿಯಾಪುರ ಪ್ರದೇಶದ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಅವರು ಡೆಪ್ಯೂಟಿ ಜನರಲ್ ಮ್ಯಾನೇಜರ್ ಮತ್ತು ಇತರ ಆರು ಸಹೋದ್ಯೋಗಿಗಳಿಂದ ಕಿರುಕುಳ ಅನುಭವಿಸುತ್ತಿದ್ದರೆಂದು  ಪೊಲೀಸರು ತಿಳಿಸಿದ್ದಾರೆ.

ಇದೀಗ ಡೆಪ್ಯೂಟಿ ಜನರಲ್ ಮ್ಯಾನೇಜರ್ ತ್ತು ಆಕೆಯ ಇತರ ಆರು ಸಹೋದ್ಯೋಗಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮೃತ ಮಹಿಳೆ ಪತಿಯ ದೂರಿನ ಮೇರೆಗೆ ಮಿಯಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಶ್ ಶಮಾಲಾ ಪ್ರಕಾರ, ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದಾಗ ನೇಣು ಹಾಕಿಕೊಂಡಿದ್ದಾರೆ.ಅವರ ಕುಟುಂಬ ಸದಸ್ಯರು ಆಗಮಿಸಿ ಅವರ ಬೆಡ್ ರೂಮಿನ ಬಾಗಿಲು ತೆಗೆದಾಗ ಛಾವಣಿಯಲ್ಲಿ ನೇತಾಡುತ್ತಿರುವ ಮಹಿಳೆಯ ಶವ ಕಾಣಿಸಿದೆ. ಮಹಿಳೆ ಭೋಪಾಲ್ ಮೂಲದವರಾಗಿದ್ದು ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಒಂದನ್ನು ಬರೆದಿಟ್ಟಿದ್ದಾರೆ.ಇದರಲ್ಲಿ ಡಿಜಿಎಂ ಮತ್ತು ಇತರ ಆರು ಭೆಲ್ ಉದ್ಯೋಗಿಗಳು ತನ್ನ ಮೇಲೆ ಬೇಹುಗಾರಿಕೆ ನಡೆಸುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ತಮ್ಮ ಮೊಬೈಲ್ ಫೋನ್ ಅನ್ನು ಹ್ಯಾಕ್ ಮಾಡಿದ್ದಾರೆ ಮತ್ತು ಅವರ ಕರೆಗಳನ್ನು ಟ್ಯಾಪ್ ಮಾಡಿದ್ದಾರೆ ಎಂದೂ ಹೇಳಿದ್ದಾರೆ.ಈ ಹಿಂದೆ ಭೋಪಾಲ್‌ನಲ್ಲಿ ಪೋಸ್ಟ್ ಮಾಡಿದಾಗ ಕೆಲವು ಸಹೋದ್ಯೋಗಿಗಳು ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

SCROLL FOR NEXT