ಕಾಂಗ್ರೆಸ್ ಸಂಸದ ಹಿಬಿ ಈಡನ್ ಮತ್ತು ಪತ್ನಿ ಅನ್ನಾ ಲಿಂಡಾ ಈಡನ್ 
ದೇಶ

ಫೇಸ್ ಬುಕ್ ನಲ್ಲಿ ಹಣೆಬರಹ, ರೇಪ್ ಪೋಸ್ಟ್: ಕ್ಷಮೆ ಕೇಳಿದ ಕಾಂಗ್ರೆಸ್ ಸಂಸದನ ಪತ್ನಿ 

ಕೇರಳದ ಎರ್ನಾಕುಲಂ ಕ್ಷೇತ್ರದ ಸಂಸದ ಹಿಬಿ ಈಡನ್ ಅವರ ಪತ್ನಿ ಅನ್ನಾ ಲಿಂಡಾ ಈಡನ್ ಅವರ ಫೇಸ್ ಬುಕ್ ಪೋಸ್ಟ್ ಗೆ ತೀವ್ರ ವಿವಾದ ಬಂದ ಹಿನ್ನಲೆಯಲ್ಲಿ ಕ್ಷಮೆ ಕೇಳಿದ್ದಾರೆ. 

ಕೊಚ್ಚಿ: ಕೇರಳದ ಎರ್ನಾಕುಲಂ ಕ್ಷೇತ್ರದ ಸಂಸದ ಹಿಬಿ ಈಡನ್ ಅವರ ಪತ್ನಿ ಅನ್ನಾ ಲಿಂಡಾ ಈಡನ್ ಅವರ ಫೇಸ್ ಬುಕ್ ಪೋಸ್ಟ್ ಗೆ ತೀವ್ರ ವಿವಾದ ಬಂದ ಹಿನ್ನಲೆಯಲ್ಲಿ ಅವರು ಕ್ಷಮೆ ಕೇಳಿದ್ದಾರೆ. ವ್ಯಕ್ತಿಗಳು ಎಲ್ಲಾ ಪರಿಸ್ಥಿತಿಯನ್ನು ನಗುನಗುತ್ತಲೇ ಸ್ವೀಕರಿಸಬೇಕು ಎಂಬುದು ತಮ್ಮ ಪೋಸ್ಟ್ ನ ಸಂದೇಶವಾಗಿತ್ತಷ್ಟೇ ಹೊರತು ಇದರಲ್ಲಿ ಯಾರಿಗೂ ನೋವುಂಟುಮಾಡುವ ಉದ್ದೇಶ ನನ್ನದಾಗಿರಲಿಲ್ಲ ಎಂದಿದ್ದಾರೆ. ಜೊತೆಗೆ ವಿವಾದವಾಗುತ್ತಿದ್ದಂತೆ ತಾವು ಹಾಕಿದ್ದ ಪೋಸ್ಟ್ ನ್ನು ಡಿಲೀಟ್ ಮಾಡಿದ್ದಾರೆ.


ವಿಧಿ ಎಂಬುದು ಅತ್ಯಾಚಾರದಂತೆ. ಅದನ್ನು ವಿರೋಧಿಸಲು ಸಾಧ್ಯವಾಗದಿದ್ದರೆ ಆನಂದಿಸಲು ಪ್ರಯತ್ನಿಸಿ ಎಂದು ಅನ್ನಾ ಲಿಂಡ್ ಈಡನ್ ಒಂದು ಪೋಸ್ಟ್ ಹಾಕಿದ್ದರು. ಅಲ್ಲದೆ ಎರ್ನಾಕುಲಂನಲ್ಲಿ ಪ್ರವಾಹಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದ ತಮ್ಮ ಕುಟುಂಬಸ್ಥರ ಎರಡು ವಿಡಿಯೊಗಳನ್ನು ಹಾಕಿದ್ದರು. ಒಂದು ವಿಡಿಯೊದಲ್ಲಿ ತಮ್ಮ ಮಗುವನ್ನು ಪ್ರವಾಹ ಪೀಡಿತ ಮನೆಯಿಂದ ಸಣ್ಣ ದೋಣಿಯಲ್ಲಿ ಸುರಕ್ಷಿತವಾಗಿ ಕರೆದುಕೊಂಡು ಹೋಗುವುದು ಮತ್ತು ಮತ್ತೊಂದು ವಿಡಿಯೊದಲ್ಲಿ ಅವರ ಪತಿ ಈಡನ್ ಐಸ್ ಕ್ರೀಮ್ ತಿನ್ನುವ ಫೋಟೋ ಹಾಕಿದ್ದರು.


ನನ್ನ ಪೋಸ್ಟ್, ಬರಹದಿಂದ ಯಾರಿಗಾದರೂ ನೋವಾಗಿದ್ದರೆ ಅವರ ಕ್ಷಮೆ ಕೇಳುತ್ತೇನೆ. ನಾನು ಈ ಬರಹ ಹಾಕಲು ಒಂದೇ ಒಂದು ಕಾರಣವೆಂದರೆ ಯಾರಾದರೂ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರೆ ಅವರು ಅದನ್ನು ನಗುನಗುತ್ತಾ ಎದುರಿಸಲಿ ಎಂಬುದಾಗಿತ್ತು. ಕಳೆದೊಂದು ವಾರದಿಂದ ನನ್ನ ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿದ್ದಾರೆ. ನಂತರ ಪ್ರವಾಹ ಬಂತು, ಮನೆ ಜಲಾವೃತವಾಗಿತ್ತು. ಈ ಸಂದರ್ಭದಲ್ಲಿ ಮನೆಯಿಂದ ಹೊರಹೋಗಲು ತೀವ್ರ ಕಷ್ಟವಾಗುತ್ತಿದೆ. ಈಡನ್ ಅವರು ಚುನಾವಣೆಯಲ್ಲಿ ಬ್ಯುಸಿಯಾಗಿದ್ದರು, ಈ ಪರಿಸ್ಥಿತಿಯಲ್ಲಿ ನಾನು ಪೋಸ್ಟ್ ಹಾಕಿದೆ ಎಂದು ಅನ್ನಾ ಬರೆದುಕೊಂಡಿದ್ದಾರೆ.


ನಾನು ಚಿಕ್ಕವಳಿದ್ದಾಗ ಅಮಿತಾಬ್ ಬಚ್ಚನ್ ಅವರು ಕೂಡ ಇಂತಹದ್ದೇ ಬರಹವನ್ನು ಬರೆದಿದ್ದರು ಎಂದು ನನಗೆ ನೆನಪು. ಅವರ ಆ ಬರಹ ನನ್ನ ಮೇಲೆ ತೀವ್ರ ಪರಿಣಾಮ ಮತ್ತು ಸ್ಪೂರ್ತಿ ಉಂಟುಮಾಡಿದವು. ಇವತ್ತು ಕೂಡ ಅವರ ಬರಹ ಸಾಂತ್ವನದಂತೆ ನನಗೆ ತೋರುತ್ತಿದೆ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT