ಜಮ್ಮು: ಕಮಾಂಡರ್ ರಣಬೀರ್ ಸಿಂಗ್ ಇದ್ದ ಸೇನಾ ಹೆಲಿಕಾಪ್ಟರ್ ಅಪಘಾತ
ಸೇನಾ ಹೆಲಿಕಾಪ್ಟರ್ ಒಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ ಈ ಹೆಲಿಕಾಪ್ಟರ್ ನಲ್ಲಿ ಸೇನೆಯ ಉತ್ತರ ವಿಭಾಗದ ಕಮಾಂಡರ್ ಸಹ ಇದ್ದರೆಂಬುದು ಗಮನಾರ್ಹ.
ಜಮ್ಮು: ಸೇನಾ ಹೆಲಿಕಾಪ್ಟರ್ ಒಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ ಈ ಹೆಲಿಕಾಪ್ಟರ್ ನಲ್ಲಿ ಸೇನೆಯ ಉತ್ತರ ವಿಭಾಗದ ಕಮಾಂಡರ್ ಸಹ ಇದ್ದರೆಂಬುದು ಗಮನಾರ್ಹ.
ತಾಂತ್ರಿಕ ದೋಷಗಳಿಂದ ಈ ಅವಗಢ ಸಂಭವಿಸಿದೆ ಎಂದು ನಂಬಲಲಾಗಿದ್ದು ಹೆಲಿಕಾಪ್ಟರ್ ಪೂಂಚ್ ಜಿಲ್ಲೆಯ ಬೇಡರ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನೆಯ ಉತ್ತರ ವಿಭಾಗದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಇಬ್ಬರು ಪೈಲಟ್ಗಳು ಸೇರಿದಂತೆ ಏಳು ಮಂದಿಯನ್ನು ಒಳಗೊಂಡಿದ್ದ ಈ ಹೆಲಿಕಾಪ್ಟರ್ ಅಪಘಾತವಾಗಿದ್ದು ಇದುವರೆವಿಗೆ ಯಾವುದೇ ಪ್ರಾಣಹಾನಿಯ ವರದಿ ಬಂದಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.