ದೇಶ

ದೀಪಾವಳಿ ವಿಶೇಷ: 5.5 ಲಕ್ಷ ದೀಪ ಬೆಳಗಿಸಿ ಗಿನ್ನಿಸ್ ದಾಖಲೆ ಬರೆದ ಶ್ರೀರಾಮನ ಅಯೋಧ್ಯೆ!

Raghavendra Adiga

ಅಯೋಧ್ಯೆ: ಶನಿವಾರ ದೀಪಾವಳಿ ಮುನ್ನಾದಿನದಂದು ಹಿಂದೂಗಳ ಪಾಲಿನ ಪವಿತ್ರ ಕ್ಷೇತ್ರ ಅಯೋಧ್ಯೆ ಹೊಸದೊಂದು ದಾಖಲೆಗೆ ಸಾಕ್ಷಿಯಾಗಿದೆ. ನಗರದಲ್ಲಿ ಒಟ್ಟಾರೆ  5.5 ಲಕ್ಷ ದೀಪಗಳ ಹಚ್ಚುವ ಮೂಲಕ ಗಿನ್ನಿಸ್ ಬುಕ್ ದಾಖಲೆಗೆ ಸೇರಿದೆ.

5.50 ಲಕ್ಷ ದೀಪಗಳಲ್ಲಿ, ಸುಮಾರು 4 ಲಕ್ಷಗಳನ್ನು ರಾಮ್ ಪೈಡಿಯಲ್ಲಿ ಬೆಳಗಿಸಲಾಗಿದ್ದರೆ ಉಳಿದವು ನಗರದ ಇತರೆ ದೇವತಾ ಮಂದಿರಗಳಲ್ಲಿ ಬೆಳಗಲ್ಪಟ್ಟವು. 

ಅಯೋಧ್ಯೆಯಲ್ಲಿ ದೀಪಗಳ ಹಬ್ಬವಾದ ದೀಪಾವಳಿಯಲ್ಲಿ ಭಾಗವಹಿಸಲು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಿದ್ದರು. ಈ ವೇಳೆ ಶ್ರೀರಾಮನ ಆಳ್ವಿಕೆ ನಡೆಸಿದ ತ್ರೇತಾಯುಗದ ಮರುನಿರ್ಮಾಣ ಮಾಡಲಾಗಿತ್ತು. ಶ್ರೀರಾಮ ಹಾಗೂ ಸೀತಾಮಾತೆಯರು ಪುಷ್ಪಕ ವಿಮಾನದ ಮೂಲಕ ಸರಯೂ ನದಿಯ ದಂಡೆ ಮೇಲಿಳಿದ ದೃಶ್ಯಗಳನ್ನು ಪುನರ್ ಸೃಷ್ಟಿಸಲಾಗಿತ್ತು.

ದೇವಾಲಯದ ಪಟ್ಟಣದ ಕುರಿತು ತಮ್ಮ ಪ್ರೀತಿಯನ್ನು ಹಂಚಿಕೊಂಡ ಸಿಎಂ ಯೋಗಿ ಹಿಂದಿನ ಸಿಎಂ ಗಳು ಅಯೋಧ್ಯೆ ಭೇಟಿಯನ್ನು ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ನಾನು ಕಳೆದ ಎರಡೂ ವರೆ ವರ್ಷಗಳಲ್ಲಿ ಒಂದು ಡಜನ್ ಗು ಹೆಚ್ಚು ಬಾರಿ ಅಯೋಧ್ಯೆಗೆ ಭೇಟಿ ಕೊಟ್ಟಿದ್ದೇನೆ ಎಂದರು.

"ಕಳೆದ ವರ್ಷದ ದಾಖಲೆಯು ಘಾಟ್‌ನಲ್ಲಿ ಮೂರು ಲಕ್ಷ ಒಂದು ಸಾವಿರದ ನೂರ ಎಂಭತ್ತಾರು ದೀಪಗಳನ್ನು ಬೆಳಗಿಸಲಾಗಿತ್ತು. ಈ ಬಾರಿ ನಾಲ್ಕು ಲಕ್ಷ 10 ಸಾವಿರ'ದೀಪಗಳನ್ನಿರಿಸಲಾಗಿದೆ.ಇದನ್ನು ಗಿನ್ನಿಸ್ ದಾಖಲೆಗಾಗಿ ಪರಿಗಣಿಸಲಾಗಿದೆ.ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿಯಿಂದ  ಇದು ಹೊಸ ದಾಖಲೆಯಾಗಿ ಮಾನ್ಯತೆ ಪಡೆದಿದೆ. ಘಾಟ್ ಹೊರತಾಗಿ ಬೇರೆಡೆಗಳಲ್ಲಿ ಎರಡು ಲಕ್ಷ ದೀಪಗಳನ್ನಿರಿಸಲಾಗಿದ್ದು ಅವು ಒಟ್ತಾರೆ ಆರು ಲಖ್ಷ ತಲುಪುತ್ತದೆ" ಉತ್ತರ ಪ್ರದೇಶದ ಸರ್ಕಾರದ ಮಾಹಿತಿ ನಿರ್ದೇಶಕ ಶಿಶಿರ್ ಹೇಳಿದ್ದಾರೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನೀಡಿದ ಪ್ರಮಾಣಪತ್ರದಲ್ಲಿ, "ಉತ್ತರ ಪ್ರದೇಶದ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಡಾ.ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯ ದಿಂದ ದೀಪೋತ್ಸವ 2019 ರಲ್ಲಿ ಭಾರತದ ತೈಲ ದೀಪಗಳ ಪ್ರದರ್ಶನವನ್ನು ದಾಖಲಿಸಲಾಗಿದೆ" ಎಂದು ಬರೆಯಲಾಗಿದೆ. 

SCROLL FOR NEXT