ದೇಶ

ಪ್ರೀತಿ, ಕಾಳಜಿಯ ಹಣತೆ ಬೆಳಗಿಸೋಣ: ದೇಶದ ಜನತೆಗೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ ದೀಪಾವಳಿ ಸಂದೇಶ

Srinivas Rao BV

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ದೀಪಾವಳಿಯ ಮುನ್ನಾದಿನದಂದು ದೇಶದ ಜನತೆಗೆ ಶುಭ ಕೋರಿದ್ದಾರೆ. 

ರಾಷ್ಟ್ರಪತಿ ಕೋವಿಂದ್, ದೀಪಾವಳಿ ಕತ್ತಲನ್ನು ಕಳೆದು ಬೆಳಗುವ ಹಬ್ಬ. ಹತಾಶೆಯ ಮೇಲಿನ ವಿಜಯದ ಸಂಕೇತ ದೇಶ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರೆಲ್ಲರಿಗೂ ಶುಭವಾಗಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರೀತಿ, ಕಾಳಜಿ ಮತ್ತು ಹಂಚುವಿಕೆಯ ಹಣತೆ ಬೆಳಗಿಸುವ ಮೂಲಕ, ಭವಿಷ್ಯದ ಬಗ್ಗೆ ಹತಾಶೆ ಹೊಂದಿರುವವರು ಹಾಗೂ ನಿರ್ಗತಿಕರ ಜೀವನದಲ್ಲಿ ಸಂತೋಷವನ್ನು ತರಲು ಪ್ರಯತ್ನಿಸೋಣ. ಹಬ್ಬವು ದೇಶಾದ್ಯಂತ ಪ್ರತಿಯೊಂದು ಮನೆಯಲ್ಲಿ ಸಂತೋಷ, ಶಾಂತಿ, ಸಮೃದ್ಧಿ ತರಲಿ ಎಂದು ಹೇಳಿದ್ದಾರೆ.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ದೀಪಾವಳಿಯು ಕಟ್ಟಕಡೆಗೆ ಸತ್ಯ ಮತ್ತು ಸದ್ಗುಣಕ್ಕೇ ಜಯ ಎಂಬ ಸಂದೇಶ ಸಾರುತ್ತದೆ.  ಈ ಸಂದರ್ಭದಲ್ಲಿ ನಮ್ಮ ದೇಶದ ಜನರಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ. ದೀಪಾವಳಿಯನ್ನು ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದೆಂದು ಕರೆಯಲಾಗುತ್ತದೆ ಮತ್ತು ಇದನ್ನು ದೇಶ, ವಿದೇಶಗಳಲ್ಲಿ ಆಚರಿಸಲಾಗುತ್ತದೆ.

ಅಂಧಕಾರದಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಬುದ್ಧಿವಂತಿಕೆಯ ಕಡೆಗೆ ಮತ್ತು ವಿಷಣ್ಣತೆಯಿಂದ ಆನಂದದ ಕಡೆಗೆ ಸಾಗಲು ಇದು ನಮಗೆ ಪ್ರೇರಣೆ ನೀಡುತ್ತದೆ. ದೀಪಾವಳಿಯು ಭರವಸೆ ಮೂಡಿಸುವ ಹಬ್ಬ. ಕತ್ತಲೆಯನ್ನು ಶಪಿಸುವ ಬದಲು ದೀಪವನ್ನು ಬೆಳಗಿಸುವಂತೆ ನಮಗೆ ಸೂಚಿಸುತ್ತದೆ. ಇದು ಮಾನವೀಯತೆಯ ಬೆಳಕಿನ ಆಚರಣೆಯಾಗಿದ್ದು, ಸದಾಚಾರದ ಹಾದಿಯನ್ನು ತೋರಿಸಬಲ್ಲದು, ಇದರಿಂದಾಗಿ ನಾವು ಉತ್ತಮ, ಹೆಚ್ಚು ಮಾನವೀಯ, ಶಾಂತಿಯುತ ಮತ್ತು ಸಹಾನುಭೂತಿಯ ಜಗತ್ತನ್ನು ನಿರ್ಮಿಸುವ ಪ್ರಯತ್ನವನ್ನು ಮುಂದುವರಿಸಬಹುದು. ಈ ಹಬ್ಬವು ನಮ್ಮ ಜೀವನದಲ್ಲಿ ಸಾಮರಸ್ಯ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ, ಎಂದು ಆಶಿಸಿದ್ದಾರೆ.

SCROLL FOR NEXT