ದೇಶ

ಬಿಜೆಪಿ ಸಾಂಗತ್ಯ: ಜೆಜೆಪಿ ತೊರೆದ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ 

Shilpa D

ಚಂಡಿಗಡ: ಹರ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಸ್ಪರ್ಧಿಸಿದ್ದ ಬಿಎಸ್ ಎಫ್ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಜೆಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ಜತೆ ಕೈಜೋಡಿಸುವುದಾಗಿ ದುಶ್ಯಂತ್ ಪಟೇಲ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಜೆಜೆಪಿ ತೊರೆಯುತ್ತಿರುವುದಾಗಿ ಬಿಎಸ್ಎಫ್ ನಿಂದ ವಜಾಗೊಂಡಿರುವ ತೇಜ್ ಬಹದ್ದೂರ್ ತಿಳಿಸಿದ್ದಾರೆ.

ಯೋಧರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿರುವುದಾಗಿ ತೇಜ್ ಬಹದ್ದೂರ್ ಆರೋಪಿಸಿದ್ದ ವೀಡಿಯೋ ವೈರಲ್ ಆದ ನಂತರ ಬಿಎಸ್ ಎಫ್ ನಿಂದ ವಜಾಗೊಳಿಸಲಾಗಿತ್ತು. ಸೆಪ್ಟೆಂಬರ್ ನಲ್ಲಿ ತೇಜ್ ಬಹದ್ದೂರ್ ಜನನಾಯಕ್ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

2017ರಲ್ಲಿ ಬಿಎಸ್ ಎಫ್ ನಿಂದ ವಜಾಗೊಂಡ ನಂತರ ತೇಜ್ ಬಹದ್ದೂರ್ ಯಾದವ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ನಂತರ ಬಿಎಸ್ಪಿ, ಎಸ್ಪಿ ಮತ್ತು ಆರ್ ಎಲ್ ಡಿ ಮಹಾಮೈತ್ರಿಕೂಟದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

SCROLL FOR NEXT