ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಹಾರಾಷ್ಟ್ರದಲ್ಲಿ ಯಾರೂ ದುಷ್ಯಂತ್ ಇಲ್ಲ: ಶಿವಸೇನೆ ನಾಯಕ! 

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ-ಶಿವಸೇನೆ ನಡುವೆ ಇನ್ನೂ ಗೊಂದಲ ಮುಂದುವರೆದಿದ್ದು, ಶಿವಸೇನೆ ಬಿಜೆಪಿಗೆ ಕುಟುಕಿದೆ.

ಮಹಾರಾಷ್ಟ್ರದಲ್ಲಿ ಯಾರೂ ದುಷ್ಯಂತ್ ಇಲ್ಲ: ಶಿವಸೇನೆ ನಾಯಕ!
Srinivas Rao BV
Updated On : 29 Oct 2019, 1:30 pm

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ-ಶಿವಸೇನೆ ನಡುವೆ ಇನ್ನೂ ಗೊಂದಲ ಮುಂದುವರೆದಿದ್ದು, ಶಿವಸೇನೆ ಬಿಜೆಪಿಗೆ ಕುಟುಕಿದೆ.

ರಾಜ್ಯದಲ್ಲಿ ಯಾರೂ ದುಷ್ಯಂತ್ ಇಲ್ಲ. ಶಿವಸೇನೆ ಧರ್ಮ ಮತ್ತು ಸತ್ಯದ ರಾಜಕಾರಣ ಮಾಡುತ್ತದೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ. ಸರ್ಕಾರ ರಚನೆಯಲ್ಲಿ ಉಂಟಾಗುತ್ತಿರುವ ವಿಳಂಬದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಂಜಯ್ ರಾವುತ್, ಹರ್ಯಾಣದ ಸರ್ಕಾರ ರಚನೆಯನ್ನು ಪ್ರಸ್ತಾಪಿಸಿದ್ದು, ಮಹಾರಾಷ್ಟ್ರದಲ್ಲಿ ತಂದೆ ಜೈಲಿನಲ್ಲಿರುವ ದುಷ್ಯಂತ್ ಯಾರೂ ಇಲ್ಲ. ಇಲ್ಲಿರುವವರು ಧರ್ಮ ಹಾಗೂ ಸತ್ಯದ ರಾಜಕಾರಣ ಮಾಡುವವರು, ಮಹಾರಾಷ್ಟ್ರದ ರಾಜಕಾರಣ ಸಂಕೀರ್ಣವಾದದ್ದು ಎಂದು ರಾವುತ್ ಹೇಳಿದ್ದಾರೆ. 

ಯಾರಾದರೂ ನಮ್ಮನ್ನು ಅಧಿಕಾರದಿಂದ ದೂರ ಇಡುತ್ತೆವೆ ಎಂದರೆ ಅದು ನಮಗೆ ಗೌರವದ ಸಂಗತಿ, ಶೀಘ್ರವೇ ನಾವು ನಿರ್ಧಾರ ಕೈಗೊಳ್ಳಲಿದ್ದೇವೆ. ಜನ ಎಷ್ಟು ಕೆಳಗಿಳಿಯುತ್ತಾರೆ ಎಂಬುದನ್ನು ಈಗ ನಾವು ನೋಡುತ್ತಿದ್ದೇವೆ, ಲೋಕಸಭಾ ಚುನಾವಣೆಗೂ ಮುನ್ನ ಏನೆಲ್ಲಾ ನಿರ್ಧಾರವಾಗಿತ್ತೋ ಅದರಂತೆ ನಮ್ಮ ಬೇಡಿಕೆಯ ಸಂಗತಿಗಳು ನಡೆಯಬೇಕು ಎಂದು ರಾವುತ್ ಹೇಳಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement