ದೇಶ

ಜಮ್ಮು-ಕಾಶ್ಮೀರ: ಗಡಿ ಭಾಗದಲ್ಲಿ ಪಾಕಿಸ್ತಾನ ಪಡೆಯಿಂದ ಗುಂಡಿನ ದಾಳಿ, ನಾಗರಿಕ ಸಾವು, ಏಳು ಮಂದಿಗೆ ಗಾಯ 

Sumana Upadhyaya

ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚ್ಚಿಲ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನಾಪಡೆ ಗುಂಡಿನ ದಾಳಿ ಆರಂಭಿಸಿದ್ದು ಓರ್ವ ನಾಗರಿಕ ಮೃತಪಟ್ಟು ಉಳಿದ ಐವರು ಗಾಯಗೊಂಡಿದ್ದಾರೆ. 


ನಿನ್ನೆ ರಾತ್ರಿಯಿಂದ ಅಲ್ಲಿ ಗುಂಡಿನ ದಾಳಿ ನಡೆಯುತ್ತಿದ್ದು ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

SCROLL FOR NEXT