ದೇಶ

ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಮಸೂದ್ ಅಜರ್ ವೈಯಕ್ತಿಕ ನಿಷೇಧಿತ ಉಗ್ರರು; ಕೇಂದ್ರ ಘೋಷಣೆ

Srinivas Rao BV

ನವದೆಹಲಿ: ತಿದ್ದುಪಡಿಯಾದ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ (ಯುಎಪಿಎ) ಉಗ್ರರಾದ ಮೌಲಾನ ಮಸೂದ್ ಅಜರ್, ದಾವೂದ್ ಇಬ್ರಾಹಿಂ, ಝಾಕಿ ಉರ್ ರೆಹಮಾನ್ ಲಖ್ವಿ ಹಾಗೂ ಹಫೀಜ್ ಸಯೀದ್ ಅವರನ್ನು ನಿಷೇಧಿತ ಉಗ್ರರು ಎಂದು ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ. 

ಗೆಜೆಟ್ ಅಧಿಸೂಚನೆ ಪ್ರಕಾರ, ಮೌಲಾನಾ ಮಸೂದ್ ಅಜರ್ ಅಲಿಯಾಸ್ ಮೌಲಾನಾ ಮೊಹಮ್ಮದ್ ಮಸೂದ್ ಅಜರ್ ಅಲ್ವಿ , ಜೈಷೆ- ಮೊಹಮದ್ ಸಂಘಟನೆಯ ಸಂಸ್ಥಾಪಕ ಹಾಗೂ ಮುಖಂಡನಾಗಿದ್ದಾನೆ. ಇದು ಯುಎಪಿಎ ಅಡಿಯ ಪಟ್ಟಿಯಲ್ಲಿನ ಆರನೇ ಪ್ರಮುಖ ಸಂಘಟನೆಯಾಗಿದೆ. ಹಫೀಜ್ ಮೊಹಮ್ಮದ್ ಸಯೀದ್ ಲಷ್ಕರ್ -ಇ-ತೊಯ್ಬಾ(ಎಲ್ ಇಟಿ) ಮತ್ತು ಜಮಾತ್ -ಉದ್ -ದಾವಾ (ಜೆಯುಡಿ) ನಿಷೇಧಿತ ಸಂಘಟನೆಗಳ ಸಂಸ್ಥಾಪಕನಾಗಿದ್ದಾನೆ. ಎಲ್ ಇಟಿ ಯುಎಪಿಎ ಕಾಯ್ದೆಯಡಿ 5ನೇ ಸ್ಥಾನದಲ್ಲಿದೆ. 

ಹಫೀಜ್ ಮೊಹಮ್ಮದ್ ಸಯೀದ್ ಅನ್ನು ವಿಶ್ವಸಂಸ್ಥೆ,  2008ರ ಡಿಸೆಂಬರ್ 10ರಂದು 1267ರ ಭದ್ರತಾ ಮಂಡಳಿಯ ಕೌನ್ಸಿಲ್ ನಿರ್ಣಯದ ಅನುಸಾರ ಜಾಗತಿಕ ಉಗ್ರ ಎಂದು ಘೋಷಿಸಿತ್ತು.

SCROLL FOR NEXT