ಸಂಗ್ರಹ ಚಿತ್ರ 
ದೇಶ

ವಾಹನ ವಿಮೆ ನವೀಕರಣ ಮಾಡಿಸಬೇಕೇ? ದುಬಾರಿ ದಂಡದ ಜೊತೆಗೆ ಸವಾರರಿಗೆ ಮತ್ತೊಂದು ಆಘಾತ!

ನೂತನ ಸಂಚಾರಿ ನಿಯಮಗಳ ಜಾರಿಯಿಂದಾಗಿ ದುಬಾರಿ ದಂಡ ಕಟ್ಟಲಾಗದೇ ಹೈರಾಣಾಗಿರುವ ವಾಹನ ಮಾಲೀಕರಿಗೆ ಮತ್ತೊಂದು ಆಘಾತ ಕಾದಿದೆ.

ನವದೆಹಲಿ: ನೂತನ ಸಂಚಾರಿ ನಿಯಮಗಳ ಜಾರಿಯಿಂದಾಗಿ ದುಬಾರಿ ದಂಡ ಕಟ್ಟಲಾಗದೇ ಹೈರಾಣಾಗಿರುವ ವಾಹನ ಮಾಲೀಕರಿಗೆ ಮತ್ತೊಂದು ಆಘಾತ ಕಾದಿದೆ.

ಮೋಟಾರು ವಾಹನ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ದುಬಾರಿ ದಂಡಕ್ಕೆ ದೇಶದ ಜನತೆ ಬೆಚ್ಚಿ ಬೀಳುತ್ತಿರುವ ಸಮಯದಲ್ಲೇ ವಾಹನ ಸವಾರರಿಗೆ ಮತ್ತೊಂದು ಆಘಾತ ಕಾದಿದೆ. ಇನ್ನು ಮುಂದೆ ವಾಹನ ವಿಮಾ ಪ್ರೀಮಿಯಂ ಸಹ ಸಂಚಾರ ನಿಯಮ ಉಲ್ಲಂಘನೆಗೆ ಲಿಂಕ್ ಆಗಲಿದೆ. ಅದರಂತೆ ಇನ್ನು ಮುಂದೆ ವಾಹನ ಚಾಲಕರು ಹೆಚ್ಚೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ, ಅವರ ವಾಹನದ ಮುಂದಿನ ವಿಮೆ ನವೀಕರಣ ಸಂದರ್ಭದಲ್ಲಿ ಅವರಿಗೆ ದಂಡ ಹಾಕುವ ಕುರಿತು ವಿಮಾ ಸಂಸ್ಥೆಗಳು ಗಂಭೀರ ಚಿಂತನೆಯಲ್ಲಿವೆ.

ಅದರಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಾಹನಗಳ ವಿಮೆ ಪ್ರೀಮಿಯಂ ಸಹ ಸವಾರನ ಸಂಚಾರ ನಿಯಮ ಉಲ್ಲಂಘನೆಗೆ ಪ್ರಕರಣಗಳಿಗೆ ಜೋಡಿಸುವ ಚೌಕಟ್ಟು ರೂಪಿಸಲು 9 ಸದಸ್ಯರ ಸಮಿತಿ ರಚಿಸಿ, ಎರಡು ತಿಂಗಳ ಒಳಗೆ ವರದಿ ಸಲ್ಲಿಸುವಂತೆ  ಸೂಚಿಸಲಾಗಿದೆ. ದೆಹಲಿಯಲ್ಲಿ ಸಂಚಾರ ನಿರ್ವಹಣೆ ಹೊಣೆ ಹೊತ್ತ  ಗೃಹ ಕಾರ್ಯದರ್ಶಿ ಗೃಹ ಕಾರ್ಯದರ್ಶಿಗಳ ಅಧೀನದ ಉನ್ನತಾಧಿಕಾರದ ಸಮಿತಿಯ ಶಿಫಾರಸಿನ ಮೇರೆಗೆ ಈ ಸಮಿತಿ ರಚಿಸಲಾಗಿದೆ.

ಐಆರ್ ಡಿಎ ಸಮಿತಿ ವಾಹನ ವಿಮೆ ಪ್ರೀಮಿಯಂ ಮೊತ್ತ ಹಾಗೂ ಸಂಚಾರ ನಿಯಮ ಉಲ್ಲಂಘನೆಯನ್ನು ಜೋಡಿಸುವ ಸಂಬಂಧ ರೂಪುರೇಷೆ ಸಿದ್ಧಪಡಿಸಲಿದೆ. ಶೀಘ್ರವೇ ಇದು ರಾಜಧಾನಿ ದೆಹಲಿಯಲ್ಲಿ ಪೈಲಟ್ ಯೋಜನೆಯಾಗಿ ಜಾರಿಗೆ ಬರಲಿದೆ. ತದನಂತರ ಇದು ದೇಶದ ಬೇರೆ ಬೇರೆ ನಗರಕ್ಕೂ ಈ ವ್ಯವಸ್ಥೆ ಬರಲಿದೆ ಎಂದೂ ಹೇಳಲಾಗುತ್ತಿದೆ.

ಇಷ್ಟಕ್ಕೂ ಏನಿದು ಯೋಜನೆ?
ಪ್ರಸ್ತುತ ಎಲ್ಲ ವಾಹನಗಳಿಗೂ ವಿಮೆ ಕಡ್ಡಾಯ. ವಿಮೆಯ ದಿನಾಂಕ ಮುಕ್ತಾಯವಾಗಿದ್ದರೆ ಅದಕ್ಕೆ ದಂಡ ಕಟ್ಟುವುದು ಹಳೆಯ ಕಾನೂನು. ಆದರೆ ನೂತನ ನಿಯಮದ ಅನ್ವಯ ಇನ್ನು ಮುಂದೆ ವಾಹನ ಚಾಲಕರು, ಹೆಚ್ಚೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ವಾಹನದ ವಿಮೆ ನವೀಕರಣ ಸಂದರ್ಭದಲ್ಲಿ ಅವರಿಂದ ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಿಸಿಕೊಂಡ ಬಳಿಕವೇ ವಾಹನಗಳ ವಿಮೆ ನವೀಕರಣ ಮಾಡಲಾಗುತ್ತದೆ. ಆಗ ವಾಹನ ಚಾಲಕರು ವಿಮೆಯ ಪ್ರೀಮಿಯಂ ನೊಂದಿಗೆ ದಂಡವನ್ನೂ ಕಟ್ಟಬೇಕಾಗುತ್ತದೆ.

ಸುರಕ್ಷಿತ ಚಾಲನೆ ಮತ್ತು ಸಂಚಾರ ನಿಯಮ ಪಾಲನೆಗಾಗಿ ವಿಮಾ ಸಂಸ್ಥೆಗಳು ಇಂತಹುದೊಂದು ಪ್ರಸ್ತಾವನ್ನು ದೆಹಲಿ ಸರ್ಕಾರದ ಮುಂದಿಟ್ಟಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?