ಸಂಗ್ರಹ ಚಿತ್ರ 
ದೇಶ

ದಂಡ ವಸೂಲಿಯಲ್ಲೂ ದಾಖಲೆ; ಟ್ರಕ್​ ಡ್ರೈವರ್​ಗೆ 1.41 ಲಕ್ಷ ರೂ. ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್!

ನೂತನ ಸಂಚಾರಿ ನಿಯಮದ ಪ್ರಕಾರ ದುಬಾರಿ ದಂಡದ ದಾಖಲೆಯನ್ನು ರಾಜಸ್ಥಾನ ಮೂಲದ ಟ್ರಕ್ ಡ್ರೈವರ್ ಮುರಿದಿದ್ದು, ಓವರ್​ಲೋಡ್​ ನಿಯಮದನ್ವಯ ಟ್ರಕ್ ಮಾಲೀಕನಿಗೆ ಬರೊಬ್ಬರಿ 1.41 ಲಕ್ಷ ರೂ ದಂಡ ವಿಧಿಸಲಾಗಿದೆ.

ನಿಯಮಕ್ಕಿಂತ ಹೆಚ್ಚಿನ ಸರಕು ತುಂಬಿದ್ದಕ್ಕಾಗಿ ಓವರ್​ಲೋಡ್​ ನಿಯಮದನ್ವಯ ದಂಡ 

ನವದೆಹಲಿ: ನೂತನ ಸಂಚಾರಿ ನಿಯಮದ ಪ್ರಕಾರ ದುಬಾರಿ ದಂಡದ ದಾಖಲೆಯನ್ನು ರಾಜಸ್ಥಾನ ಮೂಲದ ಟ್ರಕ್ ಡ್ರೈವರ್ ಮುರಿದಿದ್ದು, ಓವರ್​ಲೋಡ್​ ನಿಯಮದನ್ವಯ ಟ್ರಕ್ ಮಾಲೀಕನಿಗೆ ಬರೊಬ್ಬರಿ 1.41 ಲಕ್ಷ ರೂ ದಂಡ ವಿಧಿಸಲಾಗಿದೆ.

ಹೌದು.. ಕೇಂದ್ರ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ ಮಾಡಿದ ನಂತರ ಸಂಚಾರ ನಿಮಯ ಉಲ್ಲಂಘಿಸಿದ್ದಕ್ಕಾಗಿ ಹಲವು ವಾಹನ ಸವಾರರು ಭಾರಿ ದಂಡ ತೆತ್ತು ಸುದ್ದಿಯಾಗಿದ್ದರು. ಈ ಹಿಂದೆ ಒಡಿಶಾದಲ್ಲಿ ಹಾಕಲಾಗಿದ್ದ 80 ಸಾವಿರ ರೂ ದಂಡವೇ ವೈಯುಕ್ತಿಕ ಗರಿಷ್ಠ ದಂಡ ಪ್ರಕರಣವಾಗಿತ್ತು. ಆದರೆ ಇದೀಗ ಅದನ್ನೂ ಮೀರಿಸುವಂತೆ ರಾದಲಸ್ಥಾನ ಮೂಲದ ಟ್ರಕ್ ಡ್ರೈವರ್ ಒಬ್ಬನಿಗೆ ಪೊಲೀಸರು ಬರೊಬ್ಬರಿ 1.41 ಲಕ್ಷ ರೂ. ದಂಡ ವಿಧಿಸಿದ್ದಾರೆ. 

ರಾಜಸ್ಥಾನದ ಬಿಕಾನೇರ್​ನ ಹರ್ಮಾನ್​ ರಾಮ್​ ಭಾಂಬು ಎಂಬ ಟ್ರಕ್​ ಮಾಲಿಕನಿ​ಗೆ ಟ್ರಕ್ ​ನಲ್ಲಿ ನಿಯಮಕ್ಕಿಂತ ಹೆಚ್ಚಿನ ಸರಕು ತುಂಬಿದ್ದಕ್ಕಾಗಿ ಓವರ್​ಲೋಡ್​ ನಿಯಮದನ್ವಯ ದಂಡ ವಿಧಿಸಲಾಗಿದೆ. ‘ಸೆಪ್ಟೆಂಬರ್​ 5 ರಂದು ದೆಹಲಿ ಪೊಲೀಸರು ದಂಡ ವಿಧಿಸಿ ಟ್ರಕ್​ ವಶಕ್ಕೆ ಪಡೆದಿದ್ದರು. ಇಷ್ಟು ದುಬಾರಿ ಮೊತ್ತವನ್ನು ಹೊಂದಿಸಲು 5 ದಿನವೇ ಬೇಕಾಯಿತು. 5 ದಿನದ ನಂತರ ಸೆಪ್ಟೆಂಬರ್​ 9 ರಂದು ಕೋರ್ಟ್​ನಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡಿದ್ದೇವೆ ಎಂದು ಟ್ರಕ್​ ಮಾಲಿಕ​ ತಿಳಿಸಿದ್ದಾರೆ.

ಈ ಕುರಿತಂತೆ ಟ್ರಕ್ ಮಾಲೀಕ ಪೊಲೀಸರು ನೀಡಿದ್ದ ಚಲನ್ ಅನ್ನು ಸುದ್ದಿಸಂಸ್ಥೆ ತೋರಿಸಿದ್ದು, ಈ ಸುದ್ದಿ ಇದೀಗ ವ್ಯಾಪಕ ವೈರಲ್ ಆಗಿದೆ. ಟ್ರಕ್​ನಲ್ಲಿ ನಿಯಮಕ್ಕಿಂತ ಹೆಚ್ಚಿಗೆ ತುಂಬಿಸಲಾಗಿದ್ದ ಸರಕಿಗೆ ಮೊದಲ ಒಂದು ಟನ್​ಗೆ 20 ಸಾವಿರ ಮತ್ತು ಆ ನಂತರ ಪ್ರತಿಯೊಂದು ಟನ್ ​ಗೆ 2 ಸಾವಿರದಂತೆ ಓವರ್​ ಲೋಡ್​ ಮಾಡಿದ್ದಕ್ಕಾಗಿ ಒಟ್ಟು 48 ಸಾವಿರ ರೂ. ದಂಡ ವಿಧಿಸಲಾಗಿದೆ. ಜತೆಗೆ ಆರ್​ಸಿ ಮತ್ತು ಪರ್ಮಿಟ್​ ಇಲ್ಲದ್ದಕ್ಕಾಗಿ ಪ್ರತ್ಯೇಕವಾಗಿ ದಂಡ ವಿಧಿಸಲಾಗಿದೆ. ಎಲ್ಲಾ ಸೇರಿ ಡ್ರೈವರ್​ಗೆ 70,800 ರೂ. ಮತ್ತು ಇಷ್ಟೇ ಮೊತ್ತದ ದಂಡವನ್ನು ಟ್ರಕ್​ ಮಾಲಿಕನಿಗೆ ವಿಧಿಸಲಾಗಿದೆ. ಹೀಗಾಗಿ ದಂಡದ ಒಟ್ಟು ಮೊತ್ತ 1,41,600 ರೂ. ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್​ 3 ರಂದು ಒಡಿಶಾದ ಸಂಬಾಲ್​ಪುರ ಜಿಲ್ಲೆಯಲ್ಲಿ ಟ್ರಕ್​ ಡ್ರೈವರ್​ಗೆ 86,500 ರೂ. ದಂಡ ವಿಧಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT