ಸಂಗ್ರಹ ಚಿತ್ರ 
ದೇಶ

ಪ್ರಿಯಕರನ ಜೊತೆ ಓಡಿ ಹೋಗಲು ಕುಟುಂಬಸ್ಥರಿಗೆ ಊಟದಲ್ಲಿ ವಿಷ ಹಾಕಿದ ಅಪ್ರಾಪ್ತ ಬಾಲಕಿ!

ತಮ್ಮ ಪ್ರೀತಿಗೆ ಮುಳ್ಳಾಗುತ್ತಾರೆ ಎಂದು ಭಾವಿಸಿದ ಅಪ್ರಾಪ್ತೆಯೊಬ್ಬಳು ಕುಟುಂಸ್ಥರ ಊಟದಲ್ಲಿ ವಿಷ ಬೆರೆಸಿ ಪ್ರಿಯಕರ ಜೊತೆ ಓಡಿ ಹೋಗಿರುವ ಘಟನೆ ವರದಿಯಾಗಿದೆ.

ಲಖನೌ: ತಮ್ಮ ಪ್ರೀತಿಗೆ ಮುಳ್ಳಾಗುತ್ತಾರೆ ಎಂದು ಭಾವಿಸಿದ ಅಪ್ರಾಪ್ತೆಯೊಬ್ಬಳು ಕುಟುಂಸ್ಥರ ಊಟದಲ್ಲಿ ವಿಷ ಬೆರೆಸಿ ಪ್ರಿಯಕರ ಜೊತೆ ಓಡಿ ಹೋಗಿರುವ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಮೊರಾದಬಾದ್ ನಲ್ಲಿ ಈ ಘಟನೆ ನಡೆದಿದ್ದು ನಿನ್ನೆ ರಾತ್ರಿ ತಯಾರಿಸಿದ್ದ ಅಡುಗೆಯಲ್ಲಿ ಅಪ್ರಾಪ್ತ ಬಾಲಕಿ ವಿಷ ಬೆರೆಸಿದ್ದಾಳೆ. ಈ ಆಹಾರ ಸೇವಿಸಿದ ಬಾಲಕಿಯ ತಾಯಿ, ಸಹೋದರಿಯರು, ಸಹೋದರರು, ಅತ್ತಿಗೆ ಮತ್ತು ಸೋದರಳಿಯ ಪ್ರಜ್ಞೆ ತಪ್ಪಿದ್ದಾರೆ. 

ಈ ವೇಳೆ ಬಾಲಕಿ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಆಹಾರದಲ್ಲಿ ವಿಷದ ಪ್ರಮಾಣ ಕಡಿಮೆ ಇದ್ದಿದ್ದರಿಂದ ಪ್ರಜ್ಞೆ ತಪ್ಪಿದ್ದಾರೆ ಅಷ್ಟೇ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಮೇಲೆ ಯುವಕ ಜೈಲು ಸೇರಿದ್ದ. ಈ ಸಂಬಂಧ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಯುವಕ ಜೈಲಿನಿಂದ ಹೊರಬಂದಿದ್ದು ಅದೇ ಬಾಲಕಿ ಜೊತೆಗೆ ಇದೀಗ ಓಡಿಹೋಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

E20 ಪೆಟ್ರೋಲ್ ನಲ್ಲಿ ಹೆಚ್ಚು ಕ್ಲೋರೈಡ್ ಮಟ್ಟ ತೋರಿಸಿದ್ದ SIAM; ಸಚಿವಾಲಯಕ್ಕೆ ಕಳುಹಿಸಿದ್ದ ಪತ್ರ ವಾಪಸ್

"ಜನ ನಾಯಗನ್ ಬಜೆಟ್': ಮಹಿಳೆಯರು, ಯುವಜನತೆಗೆ ದಳಪತಿ ವಿಜಯ್ ಬಂಪರ್ ಗಿಫ್ಟ್; ಶಾಲಾ ಶಿಕ್ಷಣಕ್ಕೆ ಅತಿ ಹೆಚ್ಚು ಅನುದಾನ