ರೀಟಾ ಲಂಕಲಿಗಂ 
ದೇಶ

ಆರ್ಥಿಕ ಸಂಕಷ್ಟ: ನೇಣಿಗೆ ಶರಣಾದ ಲಾನ್ಸನ್ ಟಯೊಟಾ ಎಂಡಿ ರೀಟಾ!

ಆರ್ಥಿಕ ಸಂಕಷ್ಟದಿಂದ ಉದ್ಯಮಿಗಳು ನಷ್ಟಕ್ಕೊಳಗಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಚೆನೈನ ​ಪ್ರಸಿದ್ಧ ಉದ್ಯಮ ಸಂಸ್ಥೆಯಾದ ಲಾನ್ಸನ್ ಟೊಯೋಟಾ ಸಂಸ್ಥೆಯ ಲಾನ್ಸನ್ ಗ್ರೂಪ್ ಜಾಯಿಂಟ್ ಎಂಡಿ ರೀಟಾ ಲಂಕಲಿಗಂ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಚೆನ್ನೈ: ಆರ್ಥಿಕ ಸಂಕಷ್ಟದಿಂದ ಉದ್ಯಮಿಗಳು ನಷ್ಟಕ್ಕೊಳಗಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಚೆನೈನ್​ಪ್ರಸಿದ್ಧ ಉದ್ಯಮ ಸಂಸ್ಥೆಯಾದ ಲಾನ್ಸನ್ ಟೊಯೋಟಾ ಸಂಸ್ಥೆಯ ಲಾನ್ಸನ್ ಗ್ರೂಪ್ ಜಾಯಿಂಟ್ ಎಂಡಿ ರೀಟಾ ಲಂಕಲಿಗಂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚೈನೈನ ನುಂಗಾಬಕ್ಕಂನ ಕೊಥಾರಿ ರಸ್ತೆಯಲ್ಲಿರೋ ತಮ್ಮ ನಿವಾಸದ ಸ್ನಾನದ ಕೋಣೆಯಲ್ಲಿ ರೀಟಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಚೈನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಗುರುವಾರ ಮುಂಜಾನೆ ಈ ಘಟನೆ ಸಂಭವಿಸಿದೆ, ಬೆಳಗ್ಗೆ ಎಷ್ಟು ಹೊತ್ತಾದರೂ ರೀಟಾ ಉಪಹಾರಕ್ಕೆ ಬಾರದಿದ್ದಾಗ ಮನೆ ಕೆಲಸದವರು ಸೂಪರ್ ವೈಸರ್ ಗೆ ಮಾಹಿತಿ  ನೀಡಿದ್ದಾರೆ,. ನಂತರ ಬಾಗಿಲು ಮುರಿದು ನೋಡಿದಾಗ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. 

ಕಳೆದ ಕೆಲ ತಿಂಗಳುಗಳಿಂದ ಉಂಟಾದ ಆರ್ಥಿಕ ಸಂಕಷ್ಟ ಹಾಗೂ ಅಟೋಮೊಬೈಲ್​ ಉದ್ಯಮದಲ್ಲಿ ಉಂಟಾದ ಭಾರಿ ಏರುಪೇರಿನಿಂದ ನೊಂದು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ಇನ್ನು ರೀಟಾ ಆತ್ಮಹತ್ಯೆಗೆ ಆರ್ಥಿಕ ನೀತಿ ಕಾರಣ ಎಂಬ ಆರೋಪವೂ ಕೇಳಿಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!