ದೇಶ

ಜೈಲಿಗೆ ಹೋಗಿ ಬಂದವರಿಗೆ ನನ್ನನ್ನು ಪ್ರಶ್ನಿಸುವ ನೈತಿಕತೆಯಿಲ್ಲ: ಶರದ್ ಪವಾರ್ ತಿರುಗೇಟು

Shilpa D

ಸೋಲಾಂಪುರ್: ಜೈಲಿಗೆ ಹೋಗಿ ಬಂದವರು ನನ್ನನ್ನು ಪ್ರಶ್ನಿಸಬಾರದು, ನನ್ನನ್ನು ಪ್ರಶ್ನಿಸುವ ಯಾವ ನೈತಿಕ ಹಕ್ಕು ಅವರಿಗಿಲ್ಲ ಎಂದು ಎನ್ ಸಿಪಿ ಮುಖಂಡ ಶರದ್ ಪವಾರ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ  ತಿರುಗೇಟು ನೀಡಿದ್ದಾರೆ.

2010 ರಲ್ಲಿ ಸೋಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಬಂಧಿಸಿ ಕಾರಾಗೃಹದಲ್ಲಿರಿಸಲಾಗಿತ್ತು, 

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಎನ್ ಸಿಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶರದ್ ಪವಾರ್ ಏನು ಮಾಡಿದ್ದಾರೆ ಎಂದು ಬಿಜೆಪಿಯ ಒಬ್ಬ ನಾಯಕ ನನ್ನನ್ನು ಪ್ರಶ್ನಿಸಿದ್ದಾರೆ.

ಇಲ್ಲಿ ನಾನು ಒಂದು ವಿಷ್ಯ ಸ್ಪಷ್ಟಪಡಿಸುತ್ತೇನೆ, ಯಾವುದೇ ಒಳ್ಳೆಯ ಅಥವಾ ಕೆಟ್ಟ ಕೆಲಸಗಳಿಗಾಗಿ ನಾನು ಜೈಲಿಗೆ ಹೋಗಿ ಬಂದಿಲ್ಲ, ಹಲವು ತಿಂಗಳುಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಂದವರು ನಾನು ಏನು ಮಾಡಿದ್ದೇನೆ ಎಂದು ಪ್ರಶ್ನಿಸುತ್ತಾರೆ, ನಾನು ಕೇಂದ್ರ ಕೃಷಿ ಸಚಿವರಾಗಿದ್ದಾಗ ರಾತರ ಸಾಲಮನ್ನಾಕ್ಕಾಗಿ 75 ಸಾವಿರ ಕೋಟಿ ಹಣ ನೀಡಿದ್ದೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಅಮಿತ್ ಶಾ, ಮಹಾರಾಷ್ಟ್ರಕ್ಕಾಗಿ ಶರದ್ ಪವಾರ್ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದರು. 

SCROLL FOR NEXT