ಸಾಂದರ್ಭಿಕ ಚಿತ್ರ 
ದೇಶ

ಮಾಟ-ಮಂತ್ರ ಮಾಡಿದ ಶಂಕೆ: ಆಟೋ ಡ್ರೈವರ್ ನನ್ನು ಚಿತೆಗೆ ಎಸೆದ ಗ್ರಾಮಸ್ತರು!

ಮಾಟಮಂತ್ರ ಮಾಡಿಸಿದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆಂದು ವ್ಯಕ್ತಿಯೊಬ್ಬರ ಮೇಲೆ ಅನುಮಾನಗೊಂಡ ಗ್ರಾಮಸ್ಥರು ಮಹಿಳೆಯ ಚಿತೆಯೊಂದಿಗೆಯೇ ವ್ಯಕ್ತಿಯನ್ನೂ ಜೀವಂತವಾಗಿ ಸುಟ್ಟು ಹಾಕಿರುವ ಘಟನೆಯೊಂದು ಹೈದರಾಬಾದ್'ನ ಅದ್ರಸ್ಪಲ್ಲಿ ಗ್ರಾಮದಲ್ಲಿ ನಡೆದಿದೆ. 

ಹೈದರಾಬಾದ್: ಮಾಟಮಂತ್ರ ಮಾಡಿಸಿದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆಂದು ವ್ಯಕ್ತಿಯೊಬ್ಬರ ಮೇಲೆ ಅನುಮಾನಗೊಂಡ ಗ್ರಾಮಸ್ಥರು ಮಹಿಳೆಯ ಚಿತೆಯೊಂದಿಗೆಯೇ ವ್ಯಕ್ತಿಯನ್ನೂ ಜೀವಂತವಾಗಿ ಸುಟ್ಟು ಹಾಕಿರುವ ಘಟನೆಯೊಂದು ಹೈದರಾಬಾದ್'ನ ಅದ್ರಸ್ಪಲ್ಲಿ ಗ್ರಾಮದಲ್ಲಿ ನಡೆದಿದೆ. 

ಬೊಯಿನಿ ಆಂಜನೇಯುಲು ಸಾವನ್ನಪ್ಪಿದ್ದ ವ್ಯಕ್ತಿಯಾಗಿದ್ದಾನೆ. ಆಟೋ ಚಾಲಕನಾಗಿರುವ ಈತ ಹಲವು ದಿನಗಳಿಂದ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದರು. 

ಗ್ಯಾರ ಲಕ್ಷ್ಮಿ ಎಂಬ ಮಹಿಳೆ ಮೇಲೆ ಆಂಜನೇಯುಲು ಮಾಟಮಂಟ್ರ ಮಾಡಿಸಿದ ಪರಿಣಾಮ ತಿಂಗಳುಗಳಿಂದ ಅನಾರೋಗ್ಯಕ್ಕೀಡಾಗಿದ್ದ ಮಹಿಳೆ, ನಂತರ ಸಾವನ್ನಪ್ಪಿದ್ದಾಳೆಂದು ಹೇಳಲಾಗುತ್ತಿತ್ತು. ಇದನ್ನು ಅರಿತ ಗ್ರಾಮಸ್ಥರು ಕೆಂಡಾಮಂಡಲಗೊಂಡು ಅಂತ್ಯ ಸಂಸ್ಕಾರದ ವೇಳೆ ಸ್ಥಳದಲ್ಲಿದ್ದ ಆಂಜನೇಯುಲುನನ್ನು ಥಳಿಸಿ ಮಹಿಳೆಯ ಚಿತೆ ಮೇಲೆಯೇ ಸಜೀವವಾಗಿ ಸುಟ್ಟು ಹಾಕಿದ್ದಾರೆ. 

ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ. 

ಆಂಜನೇಯುಲು ಎಲ್ಲಿದ್ದಾರೆಂಬುದು ಯಾರಿಗೂ ತಿಳಿದಿಲ್ಲ. ಊರಿನಲ್ಲಿಯೂ ಎಲ್ಲಿಯೂ ಕಾಣುತ್ತಿಲ್ಲ. ಆದರೆ, ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ವ್ಯಕ್ತಿಯ ಪಾದರಕ್ಷೆಗಳು ದೊರೆತಿವೆ ಎಂದು ಆತನ ಸಂಬಂಧಿಕರು ಹೇಳುತ್ತಿದ್ದಾರೆ. ಮತ್ತಷ್ಟು ಮಾಹಿತಿಗಾಗಿ ಗ್ರಾಮದಲ್ಲಿಯೇ ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಶಮೀರ್ಪೇಟ್ ಪೊಲೀಸ್ ಅಧಿಕಾರಿ ಬಿ.ನವೀನ್ ರೆಡ್ಡಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!