ದೇಶ

ವಾಯುಪಡೆಗೆ ದೈತ್ಯಶಕ್ತಿ: ಫ್ರಾನ್ಸ್‌ನಿಂದ ಮೊದಲ ರಾಫೆಲ್ ಜೆಟ್ ಸ್ವೀಕರಿಸಿದ ಐಎಎಫ್

Raghavendra Adiga

ನವದೆಹಲಿ: ಸುದೀರ್ಘ ನಿರೀಕ್ಷೆಯ ನಂತರ , ಭಾರತೀಯ ವಾಯುಪಡೆ (ಐಎಎಫ್) ಫ್ರಾನ್ಸ್‌ನಿಂದ ತನ್ನ ಮೊದಲ ರಾಫೆಲ್ ಫೈಟರ್ ಜೆಟ್‌ ವಿಮಾನವನ್ನು ಸ್ವೀಕರಿಸಿದೆ.

ಎಎನ್‌ಐ  ವರದಿಯಂತೆ ಐಎಎಫ್ ತನ್ನ ಮೊದಲ ರಾಫೆಲ್ ಯುದ್ಧ ವಿಮಾನವನ್ನು ಫ್ರೆಂಚ್ ಸಂಸ್ಥೆ ಡಸಾಲ್ಟ್ ಏವಿಯೇಷನ್‌ನಿಂದ ಗುರುವಾರ ಪಡೆದುಕೊಂಡಿದೆ.ಡೆಪ್ಯೂಟಿ ಚೀಫ್ ಏರ್ ಮಾರ್ಷಲ್ ವಿ.ಆರ್. ಚೌಧರಿ  ಫ್ರಾನ್ಸ್ ಭೇಟಿಯ ವೇಳೆ ರಾಫೆಲ್ ವಿಮಾನವನ್ನು ಸ್ವೀಕರಿಸಿದ್ದಾರೆ. ಅಲ್ಲದೆ ಚೌಧರಿ  ಮಾರು ಒಂದು ಗಂಟೆ ವಿಮಾನದಲ್ಲಿ ಹಾರಾಟ ನಡೆಸಿದರು.

ವಿಮಾನದ ಮೇಲಿನ ಸಂಖ್ಯೆ RB-01 ಎಂದಿದ್ದು ಇದು  ಏರ್ ಮಾರ್ಷಲ್ ಆರ್ ಕೆಎಸ್ ಬಧೌರಿಯಾ ಅವರ ಹೆಸರನ್ನು ಸೂಚಿಸುತ್ತದೆ.

ಏರ್ ಮಾರ್ಷಲ್ ಬಧೌರಿಯಾ ಭಾರತೀಯ ವಾಯುಪಡೆ ಮುಖ್ಯಸ್ಥರಾಗಿ ನೇಮಕಗೊಂಡಿದ್ದು ಇವರು ಭಾರತ ಮತ್ತು ಫ್ರಾನ್ಸ್ ನಡುವಿನ ರಾಫೆಲ್ ಒಪ್ಪಂದ ಕಾರ್ಯರೂಪಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಜೆಟ್ ಹಾರಾಟ ನಡೆಸಿದ ಮೊದಲ ಐಎಎಫ್ ಅಧಿಕಾರಿಗಳ ಪೈಕಿ ಒಬ್ಬರಾಗಿದ್ದರು.

ಸುಮಾರು 58,000 ಕೋಟಿ ರೂ.ಗಳ ವೆಚ್ಚದಲ್ಲಿ 36 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿಸಲು ಭಾರತ 2016 ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

ಭಾರತೀಯ ವಾಯುಸೇನೆಯ ಫೌಂಡೇಷನ್ ಡೇ ದ ಅಕ್ಟೋಬರ್ 8 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ಯಾರೀಸ್ ನಲ್ಲಿ 36 ರಫೇಲ್ ಫೈಟರ್ ಜೆಟ್ ಗಳನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

SCROLL FOR NEXT