ದೇಶ

ಕಳ್ಳತನವಾದ ತಂತ್ರಾಂಶದಲ್ಲಿ ಐಪಿಎಂಎಸ್ ನ ದತ್ತಾಂಶ..! ಇಷ್ಟಕ್ಕೂ ಏನಿದು ಐಪಿಎಂಎಸ್..?

Srinivasamurthy VN

ಕೊಚ್ಚಿ: ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ತಯಾರಾಗುತ್ತಿರುವ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಯುದ್ಧ ವಿಮಾನವಾಹಕ ನೌಕೆಯಲ್ಲಿ ಕಳ್ಳತನವಾಗಿರುವ ತಂತ್ರಾಂಶಗಳಲ್ಲಿ ನೌಕೆಯ ಐಪಿಎಂಎಸ್ ದತ್ತಾಂಶ ಕೂಡ ಇತ್ತು ಎನ್ನಲಾಗಿದೆ.

ಇಷ್ಟಕ್ಕೂ ಏನಿದು ಐಪಿಎಂಎಸ್..?
ಐಎನ್ಎಸ್ ವಿಕ್ರಾಂತ್ ನೌಕೆಯಲ್ಲಿ ಕಳ್ಳತನವಾದ ತಂತ್ರಾಂಶದಲ್ಲಿ ಐಪಿಎಂಎಸ್ ನ ದತ್ತಾಂಶ ಸಂಗ್ರಹಣೆ ಇತ್ತು ಎನ್ನಲಾಗಿದೆ. ಐಪಿಎಂಎಸ್ ಎಂಬುದು ನೌಕೆಯ ನಿರ್ವಹಣಾ ವ್ಯವಸ್ಥೆ ಸಂಯೋಜಿತ ವೇದಿಕೆ (integrated platform management system) ನೌಕೆಯ ಪ್ರಮುಖ ಮೇಲ್ವಿಚಾರಣಾ ಘಟಕವಾಗಿದ್ದು, ನೌಕೆಯಲ್ಲಿನ ಯಾಂತ್ರಿಕ, ವಿದ್ಯುತ್ ಮತ್ತು ಹಾನಿ ನಿಯಂತ್ರಣ ಯಂತ್ರೋಪಕರಣಗಳು ಮತ್ತು ವ್ಯವಸ್ಥೆಗಳ ನೈಜ-ಸಮಯದ ಮೇಲ್ವಿಚಾರಣೆ ಮತ್ತು ನಿಯಂತ್ರಣ ಕೆಲಸವನ್ನು ಮಾಡುತ್ತದೆ. ನೌಕೆಯ ಬಹುತೇಕ ಎಲ್ಲ ಕಾರ್ಯಗಳೂ ಇದೇ ಐಪಿಎಂಎಸ್ ಘಟಕದ ಮೂಲಕ ನಿಯಂತ್ರಿಸಲಾಗುತ್ತದೆ. ಇಂತಹ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ತಂತ್ರಾಂಶದ ದತ್ತಾಂಶಗಳು ಪ್ರಸ್ತುತ ಕಳವಾಗಿರುವ ತಂತ್ರಾಂಶಗಳಲ್ಲಿತ್ತು ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ  ನೌಕೆ ನಿರ್ಮಾಣ (ಖಾಸಗಿ)ದ ಮುಖ್ಯ ಎಂಜಿನಿಯರ್ ಕೆ ಬಾಬಿ ಕುರುವಿಲಾ ಅವರು, ಐಪಿಎಂಎಸ್ ನೌಕೆಯ ಬಹುತೇಕ ಎಲ್ಲ ಕಾರ್ಯಗಳ ನಿಯಂತ್ರಣ ಘಟಕವಾಗಿರುತ್ತದೆ. ಪ್ರಮುಖವಾಗಿ ಶಸ್ತ್ರಾಸ್ತ್ರ ಪ್ರಯೋಗ ಕಾರ್ಯ, ನೌಕೆಯ ವಿದ್ಯುತ್, ತಂತ್ರಾಂಶ ನಿಯಂತ್ರಣ, ರಾಡಾರ್ ನಿಯಂತ್ರಣದಂತಹ ಪ್ರಮುಖ ಘಟಕಗಳು ವಿಫಲವಾದಾಗ ಅವುಗಳ ಕುರಿತಂತೆ ಮುನ್ಸೂಚನೆ ನೀಡುವ ಕಾರ್ಯವನ್ನು ಐಪಿಎಂಎಸ್ ಮಾಡುತ್ತದೆ. ಇದು ನೀಡುವ ಸೂಚನೆಯಾಧಾರದ ಮೇಲೆಯೇ ತಂತ್ರಾಂಶಗಳನ್ನುಮಾನವ ನೆರವಿನಿಂದ ದುರಸ್ತಿ ಮಾಡಲಾಗುತ್ತದೆ. ಇಂತಹ ಅತ್ಯಂತ ಮಹತ್ವದ ನಿಯಂತ್ರಣ ಘಟಕದ ದತ್ತಾಂಶಗಳೇ ಕಳ್ಳತನವಾಗಿರುವುದು ನೌಕೆಯ ಸೂಕ್ಷ್ಮ ದತ್ತಾಂಶ ಕಳ್ಳತನವಾದಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT