ದೇಶ

ಹೆಚ್ಚು ಭಾಷೆ ಕಲಿಯಿರಿ, ಮಾತೃ ಭಾಷೆ ಮರೆಯದಿರಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

Vishwanath S

ನವದೆಹಲಿ: ಜನರು ಸಾಧ್ಯವಾದಷ್ಟು ಹೆಚ್ಚು ಭಾಷೆಗಳನ್ನು ಕಲಿಯಬೇಕು ಯಾವುದೇ ಭಾಷೆಯನ್ನು ಬಲವಂತವಾಗಿ ಹೇರಬಾರದು,ಅದೆ ರೀತಿ ಯಾವುದೇ ನಿರ್ದಿಷ್ಟ ಭಾಷೆಯ ವಿರುದ್ಧ ಕಠಿಣ ವಿರೋಧವೂ ಇರಬಾರದು ಎಂದು ಉಪರಾಷ್ಟಪತಿ ಎಂ.ವೆಂಕಯ್ಯ ನಾಯ್ಡು ಅವರು ಕರೆ ನೀಡಿದ್ದಾರೆ.

ಶಾರದಾ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಭಾರತವು ಅನೇಕ ವೈವಿಧ್ಯ ಸಮೃದ್ಧ ಭಾಷೆಗಳಿಂದ ಕೂಡಿದೆ ಹೆಚ್ಚುಭಾಷೆ ಕಲಿತರೂ ಮಾತೃಭಾಷೆಗೆ ಮಹತ್ವ ಕೊಡಬೇಕು,ಮರೆಯಬಾರದು ಎಂದೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಒತ್ತಿ ಹೇಳಿದರು. ಶಿಕ್ಷಣ ಮತ್ತು ಉತ್ತಮ ಕಲಿಕೆಯ ಅನುಭವ ಸಂಸ್ಕೃತಿ, ಪರಂಪರೆ, ಭಾಷೆ ಮತ್ತು ಪಾಕ ಪದ್ಧತಿಯ ವಿವಿಧ ಅಂಶಗಳನ್ನು ತಿಳಿದುಕೊಳ್ಳಲು ಎಲ್ಲಾ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಅವರು ಸಲಹೆ ಮಾಡಿದರು. 

ದೇಶಿಯ ಪ್ರವಾಸೋದ್ಯಮ ಉತ್ತೇಜಿಸಲು 2022 ರ ವೇಳೆಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯನ್ನು ಉಲ್ಲೇಖಿಸಿದ ಅವರು ಭಾರತದ ಐತಿಹಾಸಿಕ,ಆಧ್ಯಾತ್ಮಿಕ, ರಮಣೀಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಸಾಂಸ್ಕೃತಿಕ ಪರಂಪರೆ ಅನ್ವೇಷಿಸಲು ಸಲಹೆ ನೀಡಿ ಇದರಿಂದ ವಿದ್ಯಾರ್ಥಿಗಳ ಜ್ಞಾನವೂ ಹೆಚ್ಚಲಿದೆ ಎಂದರು.

SCROLL FOR NEXT